ಮಾಜಿ ಶಾಸಕ ನೆಹರೂ ಓಲೇಕಾರ ಕಾಂಗ್ರೆಸ್ ಸೇರ್ಪಡೆ

ಹೊಸ ದಿಗಂತ ವರದಿ, ಹಾವೇರಿ:

ಮಾಜಿ ಶಾಸಕ, ಎಸ್ಸಿ, ಎಸ್ಟಿ ಅಯೋಗದ ಮಾಜಿ ಅಧ್ಯಕ್ಷ ನೆಹರೂ ಓಲೇಕಾರ ಬುಧವಾರ ಸುರಪುರದಲ್ಲಿ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಇವರುಗಳ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಈ ಕುರಿತು ಹಲವು ದಿನಗಳಿಂದ ಊಹಾಪೋಹಗಳು ಕೇಳಿಬಂದಿದ್ದರೂ ಗುಟ್ಟು ಬಿಟ್ಟು ಕೊಡದ ಓಲೇಕಾರ ಬುಧವಾರ ಕೈ ಪಕ್ಷಕ್ಕೆ ಸೇರ್ಪಡೆಯಾದರು.

ಯಾದಗಿರಿಯಲ್ಲಿ ಪ್ರಚಾರ ಸಭೆಯಲ್ಲಿ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಶಾಲು ಹಾಕಿ ನೆಹರು ಓಲೇಕಾರ ರವರನ್ನು ಬರಮಾಡಿ ಕೊಂಡರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ದ ಹರಿಹಾಯ್ದಿದ್ದ ಓಲೇಕಾರ ರಾಜಕಾರಣದಲ್ಲಿ ತಟಸ್ಥ ನೀತಿಯನ್ನು ಪಾಲಿಸಿಕೊಂಡು ಬಂದಿದ್ದರು.

ಇದೀಗ ಓಲೇಕಾರ ಅವರು ಕಾಂಗ್ರೆಸ್ ಸೇರ್ಪಡೆ ಆಗಿದ್ದು ಕಾಂಗ್ರೆಸ್ ಗೆಲುವಿಗೆ ಸಹಕಾರಿ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. NEENIBBA PAKSHA BITTU HODARENANTE BJP PAKSHA HARIDADUVA IRUVE SALINANTE SAGUVAGA ONDU IRUVE SATTARE SWALPA GALIBILIYUNTAGUTADE ADARE SWALPA SAMAYADALLE A SATTA IRUVEYANNU BITTU MIKKELLA IRUVEGALU MATTE TAMMA SALINA PRAYANA ARAMUNDUVARESUTTAVE hage OLEKARA

LEAVE A REPLY

Please enter your comment!
Please enter your name here

error: Content is protected !!