ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಅನುಷ್ಕಾ ಶರ್ಮಾ ಅವರು ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಅವರು ಪ್ರೆಗ್ನೆಂಟ್ ಆದಾಗಿನಿಂದಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆ. ಈಗ ಮಗು ಜನಿಸಿದ ಬಳಿಕ ಅವರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾ ಜೊತೆ ರೆಸ್ಟೋರೆಂಟ್ ಒಂದರಲ್ಲಿ ಪೋಸ್ ಕೊಟ್ಟಿದ್ದಾರೆ. ಇವರ ಜೊತೆಗೆ ಆರ್‌ಸಿಬಿ ಆಟಗಾರರು ಕೂಡ ಇದ್ದರು ಅನ್ನೋದು ವಿಶೇಷ. ಈ ಫೋಟೋಗಳು ಈಗ ವೈರಲ್ ಆಗಿವೆ.
ಆರ್‌ಸಿಬಿ ಕ್ಯಾಪ್ಟನ್ ಫಾಪ್ ಡುಪ್ಲೆಸಿಸ್ ಹಾಗೂ ಅವರ ಪತ್ನಿ, ಮ್ಯಾಕ್ಸ್ವೆಲ್ ಹಾಗೂ ಅವರ ಪತ್ನಿ, ವಿರಾಟ್-ಅನುಷ್ಕಾ ಜೊತೆ ಪೋಸ್ ಕೊಟ್ಟಿದ್ದಾರೆ. ಅನುಷ್ಕಾ ಸಹೋದರ ಕರ್ಣೇಶ್ ಕೂಡ ಪಾರ್ಟಿಯಲ್ಲಿ ಇದ್ದರು.