ಕಾಳಿದೇವಿ ಪಾತ್ರ ಧರಿಸಿ ಇನ್ನೊಬ್ಬ ಬಾಲಕನ ಕತ್ತು ಸೀಳಿದ ಹುಡುಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾರ್ಯಕ್ರಮವೊಂದರಲ್ಲಿ ಕಾಳಿದೇವಿಯ ಪಾತ್ರಧಾರಿ ಬಾಲಕನ ಕತ್ತು ಸೀಳಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ 14 ವರ್ಷದ ಬಾಲಕ ಮತ್ತು ಇತರ ಇಬ್ಬರು ಮಕ್ಕಳನ್ನು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಪೊಲೀಸರ ಪ್ರಕಾರ, ಕಾನ್ಪುರದ ಬಿಲಹೌರ್ ಪ್ರದೇಶದ ಬಂಬಿಯಾನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಭಾಷ್ ಸೈನಿ ಎಂಬುವವರ ಮನೆಯಲ್ಲಿ ಭಗವತ್ ಕಥಾವನ್ನು ಆಯೋಜಿಸಲಾಗಿತ್ತು.

ಕಾಳಿಯ ಪಾತ್ರ ನಿರ್ವಹಿಸುತ್ತಿದ್ದ ಬಾಲಕ ಅಲ್ಲಿ ಬರುವ ಹತ್ಯೆ ಘಟನೆಯ ಸಂದರ್ಭದಲ್ಲಿ ತ್ರಿಶೂಲವನ್ನು ತೆಗೆದುಕೊಳ್ಳಲು ಹೇಳಲಾಯಿತು ಆದರೆ ತ್ರಿಶೂಲ ಸಿಗದ ಕಾರಣ ಕಾಳಿ ಪಾತ್ರಧಾರಿ ಹರಿತವಾದ ಚಾಕುವನ್ನು ತಂದಿದ್ದಾನೆ. ಮಿಸ್‌ ಆಗಿ ಮಾಡಲಾಗಿತ್ತೋ ಅಥವಾ ಬೇಕಂತಲೇ ಮಾಡಲಾಗಿಯೋ ಎನ್ನುಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!