ಹೊಸದಿಗಂತ ಡಿಜಿಟಲ್ ಡೆಸ್ಕ್
ಬಾಲಿವುಡ್ನ ಖ್ಯಾತ ನಿರೂಪಕಿ, ಹಾಸ್ಯ ನಟಿ ಭಾರತಿ ಸಿಂಗ್ (Bharti Singh) ಆಸ್ಪತ್ರೆಗೆ ದಾಖಲಾಗಿದ್ದಾರೆ .
ಮ್ಮ ದೈನಂದಿನ ವ್ಲಾಗ್ಗಳ ಮೂಲಕ ಯೂಟ್ಯೂಬ್ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತಿ ಸಿಂಗ್ ಆಗಾಗ ಅಪ್ಡೇಟ್ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ನಟಿ ತಮ್ಮ ವ್ಲಾಗ್ನಲ್ಲಿ ತೀವ್ರವಾದ ಹೊಟ್ಟೆ ನೋವಿನ ಬಳಿಕ ಆಸ್ಪತ್ರೆಗೆ ದಾಖಲಾಗಿರುವುದನ್ನು ಬಹಿರಂಗಪಡಿಸಿದ್ದಾರೆ.
ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಟಿ ದಾಖಲಾಗಿದ್ದು ಡ್ರಿಪ್ಗಳನ್ನು ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮೊದಲಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆ ಎಂದು ಭಾವಿಸಿ ಆಸ್ಪತ್ರೆಗೆ ಹೋಗಲಿಲ್ಲವಂತೆ. ಆದರೆ ನೋವು ಕಡಿಮೆಯಾಗದಿದ್ದಾಗ ಆಸ್ಪತ್ರೆಗೆ ತೆರಳಬೇಕಾಯಿತು ಎಂದು ಹೇಳಿದ್ದಾರೆ. ಭಾರತಿ ಸಿಂಗ್ ಅವರು ಪಿತ್ತಕೋಶದ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ವ್ಲಾಗ್ನಲ್ಲಿ ಭಾರತಿ ಮಾತನಾಡಿ ʻʻನನಗೆ ನೋವು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಪಿತ್ತಕೋಶದಲ್ಲಿ ಕಲ್ಲು ಇದೆ ಎಂದು ಆನಂತರ ಗೊತ್ತಾಯಿತು. ಪರಿಣಾಮವಾಗಿ, ನಾನು ಏನನ್ನೂ ತಿನ್ನಲು ಸಾಧ್ಯವಾಗಲಿಲ್ಲ. ವಾಂತಿ ಕೂಡ ಆಗಿತ್ತುʼʼಎಂದು ಹೇಳಿಕೊಂಡಿದ್ದಾರೆ.
ಭಾರತಿ ಸಿಂಗ್ ಅಭಿಮಾನಿಗಳು ಇದೀಗ ಕಮೆಂಟ್ ಮೂಲಕ ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತಿದ್ದಾರೆ.