ಚನ್ನಪಟ್ಟಣದಲ್ಲಿ ಎಕ್ಸ್ಪೈರಿ ಡೇಟ್‌ ಮುಗಿದ ಐಸ್‌ ಕ್ರೀಂ ಸೇವಿಸಿ 40 ಮಂದಿ ಆಸ್ಪತ್ರೆಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯಾವುದೇ ಪದಾರ್ಥ ಸೇವನೆ ಮಾಡುವ ಮುನ್ನ ಎಕ್ಸ್ಪೈರಿ ಡೇಟ್‌ ಚೆಕ್‌ ಮಾಡಿ.
ಹೌದು, ಚನ್ನಪಟ್ಟಣದ ಟಿಪ್ಪುನಗರದ ಮಿಲನ್ ಶಾದಿಮಹಲ್‌ನಲ್ಲಿ ಅವಧಿ ಮುಗಿದ ಐಸ್ ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.

ಮಿಲನ್ ಶಾದಿಮಹಲ್‌ನಲ್ಲಿ ಭಾನುವಾರ ನಡೆದ ಮದುವೆ ಸಮಾರಂಭವೊಂದರಲ್ಲಿ 80ಕ್ಕೂ ಹೆಚ್ಚು ಮಂದಿ ಐಸ್ ಕ್ರೀಂ ಸೇವಿಸಿದ್ದರು. ಈ ಪೈಕಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಸಂತ್ರರನ್ನು ಚಿಕಿತ್ಸೆಗಾಗಿ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಚನ್ನಪಟ್ಟಣ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!