ದಿನಭವಿಷ್ಯ: ಬಿಡುವಿಲ್ಲದ ದಿನ, ಏನಾದರೊಂದು ಕೆಲಸ ಬೆನ್ನು ಹತ್ತುತ್ತಲೇ ಇರುತ್ತದೆ

ಮೇಷ
ಮನಸ್ಸಿನಲ್ಲಿ ಬೇಸರ. ಅದಕ್ಕೆ ಸರಿಯಾದ ಕಾರಣ ನಿಮಗೇ ತಿಳಿಯದು.  ಖರೀದಿಯ ಹುಮ್ಮಸ್ಸಿನಲ್ಲಿ  ಹೆಚ್ಚು ಖರ್ಚಾಗಬಹುದು.

ವೃಷಭ
ಬಿಡುವಿಲ್ಲದ ದಿನ. ಏನಾದರೊಂದು ಕೆಲಸ ಬೆನ್ನು ಹತ್ತುತ್ತಲೇ ಇರುತ್ತದೆ. ಹಾಗೆಂದು ಅದರಿಂದ ನಿಮಗೆ ಖೇದವಿಲ್ಲ. ಉತ್ಸಾಹ ಕುಂದಲಾರದು.

ಮಿಥುನ
ಬಂಧುತ್ವದ ವಿಷಯದಲ್ಲಿ  ಮಹತ್ವದ ತೀರ್ಮಾನ ತೆಗೆದು ಕೊಳ್ಳಬೇಕಾದ ಪ್ರಸಂಗ. ಹೆಚ್ಚು ವಿವೇಚನೆ ಬಳಸಿ. ಭಾವಾವೇಶಕ್ಕೆ ಒಳಗಾಗದಿರಿ.

ಕಟಕ
ಬಯಸಿದ  ಕಾರ್ಯ ಮುಂದುವರಿಸಲು ಹಿಂಜರಿಕೆ ಬೇಡ. ಇತರರ ನೆಗೆಟಿವ್ ಮಾತುಗಳಿಗೆ ಕಿವಿಗೊಡದಿರಿ. ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳಿ.

ಸಿಂಹ
ಕೆಲವರ ಮಾತು, ವರ್ತನೆ ನಿಮಗಿಂದು ಅಸಹನೆ ಸೃಷ್ಟಿಸ ಬಹುದು. ಇದು ವಾಗ್ವಾದಕ್ಕೂ ಕಾರಣವಾದೀತು. ಸಹನೆ  ಕಾಯ್ದುಕೊಳ್ಳಿ.

ಕನ್ಯಾ
ವೃತ್ತಿ ಅಥವಾ ಪ್ರೀತಿಗೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳುವುದನ್ನು ಮುಂದೂಡಿ. ಏಕೆಂದರೆ ಆತುರದ ತೀರ್ಮಾನ ನಿಮಗೆ ಪ್ರತಿಕೂಲ ಪರಿಣಾಮ ಸೃಷ್ಟಿಸೀತು.

ತುಲಾ
ಕಾರ್ಯದಲ್ಲಿ ಪ್ರಾಮಾಣಿಕತೆ ಇರಲಿ. ಕಾಟಾಚಾರಕ್ಕೆ, ಯಾರನ್ನೋ ಮೆಚ್ಚಿಸಲು ಯತ್ನಿಸಬೇಡಿ. ಆರೋಗ್ಯ ಸಮಸ್ಯೆ ಕಾಡಬಹುದು. ಖರ್ಚು ಅಧಿಕ.

ವೃಶ್ಚಿಕ
ಸಣ್ಣ ವಿಷಯಕ್ಕೂ ಮನಸ್ಸು ಕೆಡಿಸಿಕೊಳ್ಳುವ ಪ್ರಸಂಗ ಉದ್ಭವಿಸೀತು. ಹೊಂದಿಕೊಂಡು ವ್ಯವಹರಿಸುವುದನ್ನು ಕಲಿಯಿರಿ. ಸಂಘರ್ಷ ಬಿಟ್ಟುಬಿಡಿ.

ಧನು
ನೀವಿಂದು ನಾಯಕನ ರೀತಿ ಮುಂಚೂಣಿ ವಹಿಸಬೇಕು. ಕೆಲಸದ ಮುಂದಾಳತ್ವ ವಹಿಸಬೇಕು. ಇತರರಿಗೆ ಕೆಲಸದ ಹೊಣೆ ಬಿಟ್ಟುಬಿಡಬೇಡಿ.

ಮಕರ
ಸಫಲ ದಿನ. ನಿಮ್ಮ ಉತ್ತಮ ಮಾತು ಮತ್ತು ನಡವಳಿಕೆ ವ್ಯವಹಾರ ಸುಲಭಗೊಳಿಸುತ್ತದೆ. ಆದರೆ ಕೆಲವರು ನಿಮ್ಮನ್ನು ಸೋಲಿಸಲು ಕಾದಿರುತ್ತಾರೆ, ಎಚ್ಚರ.

ಕುಂಭ
ಯಾವುದೇ ಕಾರ್ಯ ದಲ್ಲಿ ಇಂದು ನಿಮಗೆ ಸಫಲತೆ ನಿಶ್ಚಿತ. ಈ ದಿನ ಸದುಪಯೋಗ ಮಾಡಿಕೊಳ್ಳಿ. ನೀವು ಉದ್ದೇಶಿಸಿದ ಕಾರ್ಯ ಸಾಧಿಸಿಕೊಳ್ಳಿ.

ಮೀನ
ಮನೆಯಲ್ಲಿ ಭಿನ್ನಾಭಿಪ್ರಾಯ ಉಂಟಾದೀತು. ಆತುರದ ಪ್ರತಿಕ್ರಿಯೆ ತೋರದಿರಿ. ನಿಧಾನಕ್ಕೆ ಯೋಚಿಸಿ ಪ್ರತಿಕ್ರಿಯೆ ತೋರುವುದೊಳಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!