VIDEO | ಪ್ರಾಕ್ಟೀಸ್‌ ವೇಳೆ ಖಾಸಗಿ ಅಂಗಕ್ಕೆ ಬಾಲ್‌ ಬಿದ್ದು 11 ವರ್ಷದ ಬಾಲಕ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಾರಾಷ್ಟ್ರದಲ್ಲಿ ಮನಕಲುಕುವಂತ ದುರಾದೃಷ್ಟಕರ ಘಟನೆಯೊಂದು ನಡೆದಿದೆ. ಕ್ರಿಕೆಟ್‌ ಆಡುತ್ತಿದ್ದ ಬಾಲಕನ ಖಾಸಗಿ ಅಂಗಕ್ಕೆ ಬಾಲ್‌ ಬಿದ್ದು, ಆತ ನೋವಿನಿಂದ ನರಳಿ ಪ್ರಾಣಬಿಟ್ಟಿದ್ದಾನೆ.

ಪುಣೆಯ ಲೋಹೆಗಾಂವ್‌ನಲ್ಲಿ ತನ್ನ ಸ್ನೇಹಿತರ ಜೊತೆ ಬಾಲಕ ಶೌರ್ಯ ಖಡ್ವೆ ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿದ್ದಾಗ ಈ ದುರಂತ ನಡೆದಿದೆ. 11 ವರ್ಷದ ಶೌರ್ಯನ ಖಾಸಗಿ ಅಂಗಕ್ಕೆ ಬಾಲ್‌ ಹೊಡೆದಿದೆ. ಬಾಲು ಬಿದ್ದ ಪೆಟ್ಟಿಗೆ ಬಾಲಕ ಸ್ಥಳದಲ್ಲೇ ನೋವಿನಿಂದ ಕುಸಿದು ಬಿದ್ದಿದ್ದಾನೆ.

ಕಳೆದ ಮೇ 2ರಂದು ಈ ದಾರುಣ ಘಟನೆ ನಡೆದಿದ್ದು, ಬಾಲಕ ಕುಸಿದು ಸಾವನ್ನಪ್ಪಿದ ಕೊನೇ ಕ್ಷಣಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ನೇಹಿತರು ಶೌರ್ಯನ ಸಹಾಯಕ್ಕೆ ಧಾವಿಸಿ, ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ವೈದ್ಯರು ಬಾಲಕ ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!