SHOCKING | ಗಂಡನನ್ನು ಮಂಚಕ್ಕೆ ಕಟ್ಟಿ, ಖಾಸಗಿ ಅಂಗಕ್ಕೆ ಸಿಗರೇಟ್‌ ಸುಟ್ಟ ವಿಕೃತ ಪತ್ನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಈವರೆಗೂ ಪತ್ನಿಗೆ ಪತಿ ಚಿತ್ರಹಿಂಸೆ ನೀಡಿದ ಸುದ್ದಿಗಳನ್ನು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಪತ್ನಿ ತನ್ನ ಪತಿಗೆ ಮನಬಂದಂತೆ ಚಿತ್ರಹಿಂಸೆ ನೀಡಿದ್ದಾಳೆ.

ಉತ್ತರಪ್ರದೇಶದ ಬಿಜ್ನೋರ್​ನಲ್ಲಿ ಮಹಿಳೆಯೊಬ್ಬಳು ತನ್ನ ಪತಿಗೆ ಹಾಲಿನಲ್ಲಿ ಮಾದಕ ಮಾತ್ರೆ ಬೆರೆಸಿದ್ದಾಳೆ. ಪತಿ ಪ್ರಜ್ಞೆ ತಪ್ಪಿದ ನಂತರ ಮಂಚಕ್ಕೆ ಕಟ್ಟಿ, ಬಾಯಿಗೆ ಬಟ್ಟೆ ತುರುಕಿದ್ದಾಳೆ.

ನಂತರ ಗಂಡನ ಖಾಸಗಿ ಅಂಗಕ್ಕೆ ಸಿಗರೇಟ್‌ನಿಂದ ಸುಟ್ಟು, ಚಾಕುವಿನಿಂದ ಕೊಯ್ದು ವಿಕೃತಿ ಮೆರೆದಿದ್ದಾಳೆ. ಮದ್ಯಪಾನ, ಧೂಮಪಾನದ ಅಭ್ಯಾಸ ಇದ್ದ ಮಹಿಳೆ ತನ್ನ ಪತಿಗೆ ಚಿತ್ರಹಿಂಸೆ ನೀಡುತ್ತಿದ್ದಳು, ಮುಟ್ಟಬಾರದ ರೀತಿಯಲ್ಲೆಲ್ಲ ಖಾಸಗಿ ಅಂಗವನ್ನು ಮುಟ್ಟಿ ಹಿಂಸೆ ನೀಡುತ್ತಿದ್ದಳು ಎಂದು ಪತಿ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾರೆ.

ಈ ಬಗ್ಗೆ ವಿಷಯ ಗೊತ್ತಿದ್ದ ಕಾರಣ ಪತಿಯ ಪೋಷಕರು ರೂಮಿನಲ್ಲಿ ಆಕೆಗೆ ತಿಳಿಯದಂತೆ ಕ್ಯಾಮೆರಾ ಅಳವಡಿಸಿ, ಆಕೆಯ ಕರ್ಮಕಾಂಡವನ್ನು ಬಯಲಿಗೆಳೆದಿದ್ದಾರೆ. ಸದ್ಯ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಜೋಡಿ ವರ್ಷದ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!