ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಹಾಸನ ಸಂಸದರನ್ನು ಕುಮಾರಣ್ಣ ಅವರು ಮೊದಲ ದಿನವೇ ಅಮಾನತುಗೊಳಿಸಿದ್ದರು. ಪ್ರಜ್ವಲ್ ಅವರು ಇನ್ನೂ ನನ್ನನ್ನು ಸಂಪರ್ಕಿಸಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಪ್ರಜ್ವಲ್ ಪ್ರಕರಣ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರಕರಣವನ್ನು ಸಮಗ್ರ ತನಿಖೆಗೆ ಸಿಬಿಐಗೆ ವಹಿಸಬೇಕು.
ಪೆನ್ಡ್ರೈವ್ ವಿಚಾರವಾಗಿ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ. ಅದನ್ನು ನಾವು ಸ್ವಾಗತ ಮಾಡ್ತೀವಿ. ಆರೋಪ ಬಂದಾಗ ನಾವು ತಪ್ಪಿಸಿಕೊಳ್ಳುವ ಪ್ರಶ್ನೆ ಇಲ್ಲ. ತನಿಖೆ ಪಾರದರ್ಶಕವಾಗಿದೆಯೇ? ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಾದ ಸರಕಾರವೇ ಬೀದಿಗೆ ಬಿದ್ದಿದೆ. ವಿಡಿಯೋ ಮಾಡಿರೋದು ವಿಡಿಯೋ ಬಿಟ್ಟಿರೋದು ಎರಡು ತಪ್ಪು. ಹೆಣ್ಣು ಮಕ್ಕಳನ್ನು ಬ್ಲರ್ ಮಾಡದೇ ವೀಡಿಯೋ ಹರಿ ಬಿಟ್ಟಿದ್ದಾರೆ. ಹೆಣ್ಣು ಮಕ್ಕಳ ಭವಿಷ್ಯ ಏನಾಗಬಹುದು? ಹೆಣ್ಣು ಮಕ್ಕಳ ಪ್ರಾಣಕ್ಕೆ ಅಪಾಯವಾದರೆ ಅವರ ಕುಟುಂಬದ ಹೊಣೆ ಹೊರುವವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಬಗ್ಗೆ ಮಾತನಾಡುವುದು ಇರಲಿ ನಿಮ್ಮ ಅಣ್ಣನಾದ ಪ್ರಜ್ವಲ್ ರೇವಣ್ಣನನ್ನು ಮೊದಲು ಸೇಫ್ ಮಾಡೋದು ಬಿಡಿ ಮೀಡಿಯಾಗಳ ಮುಂದೆ ಯಾಕೆ ನಾಟಕ ಮಾಡುತ್ತೀರಾ ನೀವೆಲ್ಲ ದೇಶಾನ ಏನು ಉದ್ಧಾರ ಮಾಡ್ತೀರಾ ದೇಶದ ಜನಗಳಿಗೆ ಏನು ನ್ಯಾಯ ಕೊಡ್ತೀರಾ ಏನ್ ಕಾಪಾಡ್ತೀರಾ ದೇಶಗಳು ಜನನ