CINE | ಅಪ್ಪು ಫ್ಯಾನ್ಸ್‌ಗೆ ಸಿಹಿ ಸುದ್ದಿ, ಈ ಎರಡು ಸಿನಿಮಾ ಇಂದು ರಿ-ರಿಲೀಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಪ್ಪು ಫ್ಯಾನ್ಸ್‌ಗೆ ಖುಷಿ ವಿಷಯ, ಹೌದು, ಪುನೀತ್‌ ರಾಜ್‌ಕುಮಾರ್‌ ಅಭಿನಯದ ಎರಡು ಸಿನಿಮಾಗಳು ರೀ ರಿಲೀಸ್‌ ಆಗಿದೆ.

ಸಾಮಾನ್ಯವಾಗಿ ಒಂದು ಸಲ ಒಂದು ಸಿನಿಮಾ ಮಾತ್ರ ರಿಲೀಸ್‌ ಆಗುತ್ತಿತ್ತು ಆದರೆ ಈ ಬಾರಿ  ನಿರ್ಮಾಪಕರ ವೈಯಕ್ತಿಕ ತಿಕ್ಕಾಟದಿಂದಾಗಿ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಿವೆ. ಪುನೀರ್‌ ನಟನೆಯ ಪವರ್‌ ಹಾಗೂ ಅಂಜನಿಪುತ್ರ ಸಿನಿಮಾ ಮತ್ತೆ ರಿಲೀಸ್‌ ಆಗಿದೆ.

ಎಲೆಕ್ಷನ್‌ ಕಾರಣದಿಂದ ಥಿಯೇಟರ್‌ಗಳಲ್ಲಿ ಯಾವ ಸಿನಿಮಾಗಳು ಕೂಡ ರಿಲೀಸ್‌ ಆಗಿರಲಿಲ್ಲ. ಇದೀಗ ಅಪ್ಪು ಸಿನಿಮಾಗಳು ರಿಲೀಸ್‌ ಆಗಿದ್ದು, ಅಭಿಮಾನಿಗಳಿಗೆ ಖುಷಿ ಆಗಿದೆ. ಪುನೀತ್ ರಾಜ್​ಕುಮಾರ್ ಹಾಗೂ ತ್ರಿಷಾ ನಟಿಸಿದ್ದ ಪವರ್ ಸಿನಿಮಾ ಭೂಮಿಕಾ ಚಿತ್ರಮಂದಿರದಲ್ಲಿ ಮರು ಬಿಡುಗಡೆ ಆಗಿದೆ. ಪುನೀತ್ ರಾಜ್​ಕುಮಾರ್, ರಶ್ಮಿಕಾ ಮಂದಣ್ಣ ನಟಿಸಿದ್ದ ‘ಅಂಜನಿಪುತ್ರ’ ಸಿನಿಮಾ ನರ್ತನ್ ಚಿತ್ರಮಂದಿರದಲ್ಲಿ ಮರು ಬಿಡುಗಡೆ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!