ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುತ್ತೂರಿನ ಬೆಟ್ಟಂಪಾಡಿ ಗ್ರಾಮದ ಬರೆ ಎಂಬಲ್ಲಿ ಯುವಕನೋರ್ವನ ಶವ ಅನುಮಾನಾಸ್ಪದವಾಗಿ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಂಪ್ಯ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.
ಬೆಟ್ಟಂಪಾಡಿ ಬರೆ ದಿ.ಕೊರಗಪ್ಪ ಶೆಟ್ಟಿ ಯವರ ಪುತ್ರ ಚೇತನ್ (33ವ.) ಮೃತಪಟ್ಟವರು. ಮದ್ಯ ವ್ಯಸನಿಯಾಗಿದ್ದ ಚೇತನ್ ಮೇ.9ರಂದು ರಾತ್ರಿ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿದ್ದರು. ನಂತರ ನೆರೆಯ ಮನೆಗೆ ಹೋಗಿ ಅಲ್ಲಿಯೂ ಗಲಾಟೆ ಮಾಡಿದ್ದರು. ಅಲ್ಲಿಂದ ಚೇತನ್ ರವರನ್ನು ಆತನ ತಾಯಿ, ಬಾವ ಹಾಗೂ ನೆರೆಯ ಮನೆಯ ವ್ಯಕ್ತಿ ಸೇರಿಕೊಂಡು ಸಂಕೋಲೆಯಿಂದ ಕಟ್ಟಿ ಎಳೆದುಕೊಂಡು ಬಂದಿದ್ದರು.
ಮೃತದೇಹ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ:
ಯುವಕನ ಸಾವಿನ ಮೇಲೆ ಅನುಮಾನುಗಳು ಕಂಡು ಬಂದಿದ್ದು ಮೃತದೇಹವನ್ನು ಮಂಗಳೂರು ದೇರಳಕಟ್ಟೆಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡಯ್ಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.