ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಗಳ ಹಿಂದೆ ಜನರ ಜೀವ ಹಿಂಡಿ ಹಿಪ್ಪೆ ಮಾಡಿದ್ದ ಕೊರೋನಾ ಮಾರಿ ಭಾರತಕ್ಕೆ ಮತ್ತೆ ವಕ್ಕರಿಸಿದೆ.
ಮಹಾರಾಷ್ಟ್ರದಲ್ಲಿ 19 ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಓಮಿಕ್ರಾನ್ನ ಮತ್ತೊಂದು ತಳಿ ಇದಾಗಿದ್ದು ಅಮೆರಿಕದಲ್ಲಿ ಇದು ಅತಿ ವೇಗವಾಗಿ ಹರಡುತ್ತಿದೆ ಎನ್ನಲಾಗಿದೆ.
ಪುಣೆಯಲ್ಲಿ 51 ಪ್ರಕರಣ, ಥಾಣೆಯಲ್ಲಿ 20 ಪ್ರಕರಣಗಳು ಪತ್ತೆಯಾಗಿದೆ. ಔರಂಗಾಬಾದ್, ಅಮರಾವತಿಯಲ್ಲಿ 7 ಪ್ರಕರಣಗಳು ಪತ್ತೆಯಾಗಿದ್ದರೆ, ಸೋಲಾಪುರದಲ್ಲಿ 2 ಪ್ರಕರಣ, ಅಹಮ್ಮದ್‌ನಗರ, ನಾಸಿಕ್, ಲಾತೂರ್ ಹಾಗೂ ಸಾಂಗ್ಲಿಯಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿದೆ.
ಕೊರೋನಾ ನಿಮ್ಮ ಏರಿಯಾ ಅಥವಾ ನಿಮ್ಮ ಊರಿನಲ್ಲಿ ಬರಲಿ ಬಾರದೇ ಇರಲಿ, ಆರೋಗ್ಯಕರ ಅಭ್ಯಾಸಗಳಿಗೆ ಮಣೆ ಹಾಕಿ. ರೋಗನಿರೋಧಕ ಶಕ್ತಿಗಳು ಹೆಚ್ಚುವಂಥ ಆಹಾರ ಸೇವನೆ ಮಾಡಿ.