ದಿಗಂತ ವರದಿ ಶಿವಮೊಗ್ಗ :
ನಗರದಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್ ವಾರ್ ಹಾಗೂ ಮೂರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಶೊಯಬ್ ಯಾನೆ ಅಂಡ ಎಂಬಾತನ ಮೇಲೆ ಪೊಲೀಸರು ಗುಂಡಿ ಹಾರಿಸಿ ಸೋಮವಾರ ಬೆಳಗ್ಗೆ ಬಂಧಿಸಿದ್ದಾರೆ.
ಈತ ಗ್ರಾಮಾಂತರ ಠಾಣೆ ವ್ಯಾಪ್ರಿಯ ಬೀರನ ಕೆರೆಯಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಬಂಧಿಸಲು ಹೋದ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲುಮುಂದಾಗ ಪಿಎಸ್ಐ ಕುಮಾರ್ ಆತ್ಮರಕ್ಷಣೆಗಾಗಿ ಗುಂಡುಹಾರಿಸಿದ್ದಾರೆ. ಬಳಿಕ ಬಂಧಿಸಿ ಆಸ್ಪತ್ರೆ ದಾಖಲಿಸಲಾಗಿದೆ. ಈಗಾಗಲೇ ಈತನ ಮೇಲೆ 307 ಪ್ರಕರಣಗಳು ದಾಖಲಾಗಿವೆ.