Sunday, January 11, 2026

ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಹದ್ದುಗಳಿಗೆ ಕೋಳಿ ಮಾಂಸ ತಿನ್ನಿಸುತ್ತಾರೆ! ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಣರಾಜ್ಯೋತ್ಸವದಂದು ದೆಹಲಿಯ ರಾಜಪಥದ ಮೇಲೆ ಭಾರತೀಯ ವಾಯುಪಡೆ ಫೈಟರ್ ಜೆಟ್‌ಗಳು ಪ್ರದರ್ಶನ ನೀಡುವ ವೇಳೆ, ನೆಲಮಟ್ಟದಲ್ಲಿ ಮಹತ್ವದ ಕಾರ್ಯಾಚರಣೆಯೊಂದು ನಡೆಯಲಿದೆ. ಪಕ್ಷಿ, ಹದ್ದುಗಳ ಡಿಕ್ಕಿಯಿಂದ ವಿಮಾನಗಳಿಗೆ ಅಪಾಯ ಉಂಟಾಗದಂತೆ ತಡೆಯಲು ಈ ಬಾರಿ ವಿಶೇಷ ತಂತ್ರ ಅಳವಡಿಸಲಾಗುತ್ತಿದೆ.

ವಾಯು ಪ್ರದರ್ಶನದ ಸಮಯದಲ್ಲಿ ಹದ್ದುಗಳು ಮತ್ತು ಗರುಡಗಳು ವಿಮಾನ ಮಾರ್ಗದತ್ತ ಆಕರ್ಷಿತರಾಗದಂತೆ ಮಾಡಲು, ದೆಹಲಿ ಅರಣ್ಯ ಮತ್ತು ವನ್ಯಜೀವಿ ಇಲಾಖೆ ಸುಮಾರು 1,275 ಕಿಲೋಗ್ರಾಂ ಮೂಳೆಗಳಿಲ್ಲದ ಕೋಳಿ ಮಾಂಸವನ್ನು ಬಳಸಲು ಯೋಜನೆ ರೂಪಿಸಿದೆ. ಈ ಮಾಂಸವನ್ನು ವಿಮಾನ ಮಾರ್ಗಗಳಿಂದ ದೂರದ ಪ್ರದೇಶಗಳಲ್ಲಿ ಇಟ್ಟು, ಪಕ್ಷಿಗಳನ್ನು ಬೇರೆ ದಿಕ್ಕಿಗೆ ಸೆಳೆಯಲಾಗುತ್ತದೆ.

ಇದನ್ನೂ ಓದಿ: FOOD | ಆರೋಗ್ಯಕರ ಮೂಂಗ್ ದಾಲ್ ಕರಿ ಟ್ರೈ ಮಾಡಿ! ಅನ್ನ ಚಪಾತಿಗೆ ಇದು ಬೆಸ್ಟ್

ಹಿಂದಿನ ವರ್ಷಗಳಲ್ಲಿ ಈ ಉದ್ದೇಶಕ್ಕಾಗಿ ಎಮ್ಮೆ ಮಾಂಸ ಬಳಸಲಾಗುತ್ತಿತ್ತು. ಆದರೆ ಈ ಬಾರಿ ಮೊದಲ ಬಾರಿಗೆ ಕೋಳಿ ಮಾಂಸವನ್ನು ಆಯ್ಕೆ ಮಾಡಲಾಗಿದೆ. ಗಣರಾಜ್ಯೋತ್ಸವದ ವೇಳೆ ಸುಮಾರು 20 ಸ್ಥಳಗಳಲ್ಲಿ ಪ್ರತಿದಿನ ಸರಾಸರಿ 400 ಕೆಜಿ ಮಾಂಸ ಬಳಕೆಯಾಗಲಿದೆ. ಮಾಂಸವನ್ನು ಸಣ್ಣ ತುಂಡುಗಳಾಗಿ ಪ್ಯಾಕ್ ಮಾಡಿ ಪೂರೈಸಲಾಗುತ್ತದೆ.

ಪ್ರಸ್ತುತ ಮಾರುಕಟ್ಟೆ ದರದಂತೆ, ಈ ಯೋಜನೆಗೆ ಸುಮಾರು 4.5 ಲಕ್ಷ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದೆ. ವಾಯುಪಡೆಯೊಂದಿಗೆ ಸಮನ್ವಯದಲ್ಲಿ ಪ್ರತಿವರ್ಷ ಈ ಅಭಿಯಾನ ನಡೆಯುತ್ತಿದ್ದು, ಕಡಿಮೆ ಎತ್ತರದಲ್ಲಿ ಹಾರುವ ಯುದ್ಧವಿಮಾನಗಳ ಸುರಕ್ಷತೆಗಾಗಿ ಇದು ಅತ್ಯಂತ ಅಗತ್ಯ ಕ್ರಮ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!