ಅಮಾನವೀಯ ಘಟನೆ: ಹುಟ್ಟಿಸಿದ ಮಗುವನ್ನೇ ಸಾಲ ತೀರಿಸುವ ಸಲುವಾಗಿ ಮಾರಿದ ಪಾಪಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಲ ತೀರಿಸಲು ತಂದೆಯೇ ಮಗನನ್ನು ಮಾರಾಟ ಮಾಡಿದ ಅಮಾನವೀಯ ಘಟನೆ ಕೋಲಾರದಲ್ಲಿ ನಡೆದಿದೆ.

ಈ ಮಗು ಬಂಗಾರಪೇಟೆ ನಿವಾಸಿ ಮುನಿರಾಜು ಮತ್ತು ಪವಿತ್ರಾ ದಂಪತಿಯ ಮೂರು ತಿಂಗಳ ಮಗುವಾಗಿದೆ. ಬಂಗಾರಪೇಟೆಯ ಕಲ್ಕುಡಿ ನಿವಾಸಿ ವಾಲಿ ಎಂಬ ಮಹಿಳೆಯ ಮೂಲಕ ಮಕ್ಕಳನ್ನು ಮಾರಾಟ ಮಾಡಿದ ಆರೋಪ ಮುನಿರಾಜು ಮೇಲಿದೆ.

ಈ ಮಗು ಬಂಗಾರಪೇಟೆ ನಿವಾಸಿ ಮುನಿರಾಜು ಮತ್ತು ಪವಿತ್ರಾ ದಂಪತಿಯ ಮೂರು ತಿಂಗಳ ಮಗು. ಬಂಗಾರಪೇಟೆಯ ಕೆರೆಕೋಡಿ ನಿವಾಸಿಯಾದ ವಲ್ಲಿ ಎನ್ನುವ ಮಹಿಳೆ ಮೂಲಕ ಮುನಿರಾಜು, ಮಗು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.

ಹಣದಾಸೆಗೆ ಬಿದ್ದ ಪತಿ ಮುನಿರಾಜು 3 ತಿಂಗಳ ಗಂಡು ಮಗು ಮಾರಾಟ ಮಾಡಿದ್ದಾನೆ. ತನಗೆ ಮಗು ಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಆಯೋಗ ಹಾಗೂ ಬಂಗಾರಪೇಟೆ ಪೊಲೀಸ್ ಠಾಣೆಗೆ ಪತ್ನಿ ಪವಿತ್ರ ದೂರು ನೀಡಿದ್ದಾರೆ. ಮಗುವನ್ನ ವಾಪಾಸ್ ಕೊಡಿಸುವಂತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!