ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಕೀರ್ತಿ ಸುರೇಶ್ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ. ಕೀರ್ತಿ ಈಗಾಗಲೇ ಒಂದು ಬಾಲಿವುಡ್ ಸಿನಿಮಾಗೆ ಸಹಿ ಮಾಡಿದ್ದಾರೆ, ಅದರ ಶೂಟಿಂಗ್ ನಡೆಯುತ್ತಿದೆ. ಅದರ ಜೊತೆಗೆ ಇದೀಗ ಬಿಗ್ ಸೂಪರ್ ಸ್ಟಾರ್ ಜೊತೆ ಕೀರ್ತಿ ನಟಿಸುತ್ತಿದ್ದಾರೆ.
ಸತತ ಸೋಲು ಕಂಡು, ಗೆಲುವಿಗಾಗಿ ಹಪ-ಹಪಿಸುತ್ತಿರುವ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ನಟಿಸಲಿರುವ ಹೊಸ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಲಿದ್ದಾರೆ.
ಸಿನಿಮಾವನ್ನು ಹಿರಿಯ ಮತ್ತು ಜನಪ್ರಿಯ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶನ ಮಾಡಲಿದ್ದಾರೆ.
ಕೀರ್ತಿ ಸುರೇಶ್ ಆಯ್ಕೆ ಆಗುವುದಕ್ಕೆ ಮುನ್ನ ಈ ಪಾತ್ರಕ್ಕಾಗಿ ಆಲಿಯಾ ಭಟ್ ಹಾಗೂ ಕಿಯಾರಾ ಅಡ್ವಾಣಿಯನ್ನು ಪರಿಗಣಿಸಲಾಗಿತ್ತು. ಆದರೆ ಪಾತ್ರಕ್ಕೆ ಕೀರ್ತಿ ಸುರೇಶ್ ಇನ್ನಷ್ಟು ಸೆಟ್ ಆಗಲಿದ್ದಾರೆ ಎಂದು ಅವರನ್ನೇ ಆಯ್ಕೆ ಮಾಡಲಾಗಿದೆ.