FACT | ದಿನನಿತ್ಯ ಅಡುಗೆ ಮಾಡಲು ಮಣ್ಣಿನ ಪಾತ್ರೆ the best ಯಾಕೆ ಅಂತೀರಾ? ಇದನ್ನು ಓದಿ!

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್‌ಐಎನ್) ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ವರದಿ ಮಾಡಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಭಾರತೀಯರಿಗೆ ಆಹಾರದ ಮಾರ್ಗಸೂಚಿಗಳ ಕುರಿತು ನವೀಕರಿಸಿದ ಮಾಹಿತಿಯನ್ನು ಒದಗಿಸಿದ್ದು, ವ್ಯಾಪಕವಾದ ಸಂಶೋಧನೆ, ತಜ್ಞರೊಂದಿಗೆ ಸಮಾಲೋಚನೆ ಮತ್ತು ಪೌಷ್ಟಿಕಾಂಶ ಮತ್ತು ಆರೋಗ್ಯದ ಇತ್ತೀಚಿನ ವೈಜ್ಞಾನಿಕ ಪುರಾವೆಗಳ ಎಚ್ಚರಿಕೆಯ ವಿಶ್ಲೇಷಣೆಯ ನಂತರ ಈ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಬದಲಾಗುತ್ತಿರುವ ಜೀವನಶೈಲಿ, ಸಾಮಾನ್ಯ ರೋಗಗಳು ಮತ್ತು ಬದಲಾಗುತ್ತಿರುವ ಆಹಾರ ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯರಿಗೆ ಇದು ಅತ್ಯಂತ ನವೀಕೃತ ಪೌಷ್ಟಿಕಾಂಶದ ಸಲಹೆಯನ್ನು ಒದಗಿಸಿದೆ.

ಮುಖ್ಯ ಅನುಕೂಲಗಳು ಪರಿಸರ ಸ್ನೇಹಪರತೆ, ಕಡಿಮೆ ತೈಲ ಅವಶ್ಯಕತೆಗಳು ಮತ್ತು ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಮಣ್ಣಿನ ಪಾತ್ರೆ ಉತ್ತಮ ಎಂದಿದ್ದಾರೆ.

ಮಣ್ಣಿನ ಪಾತ್ರೆ ಸಮಾನ ಶಾಖ ವಿತರಣೆಯನ್ನು ನೀಡುತ್ತದೆ ಮತ್ತು ಆಹಾರದಲ್ಲಿ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವಿವರಿಸಿದ್ದಾರೆ. ಆರೋಗ್ಯ ದೃಷ್ಟಿಯಲ್ಲಿ ನಾನ್-ಸ್ಟಿಕ್ ಪಾತ್ರೆಗಳು ಹಾನಿಕಾರಕವೆಂದಿದ್ದು ಊಟ ಮಾಡಲು ಮಣ್ಣಿನ ಪಾತ್ರೆ ಅತ್ಯುತ್ತಮ ಆಯ್ಕೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!