ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬೆಲೆ ಏರಿಕೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಉಗ್ರರೂಪ ತಾಳಿವೆ.
ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪಾಕಿಸ್ತಾನಿ ಸೇನೆಯ ಅಧೀನದಲ್ಲಿರುವ ಅರೆಸೇನಾ ಪಡೆ ಪಾಕಿಸ್ತಾನಿ ರೇಂಜರ್‌ಗಳು ಸೋಮವಾರ ಗುಂಡಿನ ದಾಳಿ ನಡೆಸಿದ್ದು, ಮೂವರು ಮೃತಪಟ್ಟಿದ್ದಾರೆ. ಮೃತಪಟ್ಟ ಮೂವರು ನಾಗರಿಕರಾಗಿದ್ದಾರೆ.
ಏರುತ್ತಿರುವ ವಿದ್ಯುತ್ ಬಿಲ್‌ಗಳು ಮತ್ತು ಹಿಟ್ಟಿನ ಬೆಲೆಗಳ ವಿರುದ್ಧ ಪ್ರತಿಭಟಿಸಲು ಒಂದು ವರ್ಷದ ಹಿಂದೆ ಪ್ರಾರಂಭವಾದ ಅಸಹಕಾರ ಚಳವಳಿಯಿಂದ ಇತ್ತೀಚಿನ ಉದ್ವಿಗ್ನತೆ ಉಂಟಾಗಿದೆ ಎಂದು ಪಾಕಿಸ್ತಾನದ ಫ್ರೈಡೇ ಟೈಮ್ಸ್ ವರದಿ ಮಾಡಿದೆ.
#WATCH | Major unrest in Pakistan-occupied Kashmir’s (PoK) Muzaffarabad due to clashes between protestors and authorities.
This comes amid a wheel-jam strike that is continuing for the fourth consecutive day in Pakistan-occupied Kashmir (PoK).
The Awami Action Committee called… pic.twitter.com/sEvFQvbmPv
— ANI (@ANI) May 14, 2024