ಹೊಸದಿಗಂತ ವರದಿ, ಮೈಸೂರು:
ಅಪರಿಚಿತರ ವಾಟ್ಸಾಪ್ ಗ್ರೂಪ್ ಗೆ ಸೇರಿ ಷೇರು ವ್ಯವಹಾರ ಆರಂಭಿಸಿದ ಮೈಸೂರಿನ ಇಂಜಿನಿಯರ್ ಒಬ್ಬರು ಖದೀಮರ ವಂಚನೆಯ ಜಾಲಕ್ಕೆ ಸಿಲುಕಿ ೮೯.೫೦ ಲಕ್ಷ ರೂ. ಕಳೆದುಕೊಂಡಿದ್ದಾರೆ.
ನಗರದ ಶ್ರೀರಾಂಪುರ ನಿವಾಸಿ ಶಿವರಾಮ ಕೃಷ್ಣ ಹಣ ಕಳೆದುಕೊಂಡವರು. ಇವರನ್ನು ಅಪರಿಚಿತರು ವಾಟ್ಸಾಪ್ ಗ್ರೂಪ್‌ಗೆ ಆಹ್ವಾನಿಸಿದ್ದಾರೆ. ಅವರ ವಂಚನೆಯ ಬಗ್ಗೆ ಅರಿವಿಲ್ಲದೆ ವಾಟ್ಸಾಪ್ ಗ್ರೂಪ್‌ಗೆ ಸೇರಿದ್ದಾರೆ. ನಂತರ ವಂಚಕರು ಶಿವರಾಮ ಕೃಷ್ಣರಿಗೆ ಷೇರು ಮಾರುಕಟ್ಟೆಯ ಬಗ್ಗೆ ತಿಳಿಸಿ ಹಣ ಹೂಡಿಕೆ ಬಗ್ಗೆ ತರಬೇತಿ ಕೂಡ ನೀಡಿದ್ದಾರೆ.
ನಂತರ ಎಎಂಜೆಡ್ ಎಂಬ ಆಪ್ ಡೌನ್ ಲೋಡ್ ಮಾಡಿಸಿ, ಅಲ್ಲಿಂದಲೇ ಹಣ ಹೂಡಿಕೆ ಆರಂಭಿಸಿದ್ದಾರೆ. ಮೊದಲಿಗೆ ಷೇರು ಮಾರುಕಟ್ಟೆ ಲಾಭದ ಬಗ್ಗೆ ನಂಬಿಕೆ ಹುಟ್ಟಿಸುವ ಸಲುವಾಗಿ ಅವರು ಹೂಡಿದ್ದ ಹಣಕ್ಕೆ ಸ್ವಲ್ಪಮಟ್ಟಿಗಿನ ಲಾಭ ನೀಡಿದ್ದಾರೆ.
ನಂತರ ಹೆಚ್ಚಿನ ಹೂಡಿಕೆಗೆ ಪ್ರೋತ್ಸಾಹಿಸಿದ್ದಾರೆ. ಅವರ ವಂಚನೆಯನ್ನು ಅರಿಯದ ಶಿವರಾಮಕೃಷ್ಣ ತಮ್ಮ ಮಗನ ಖಾತೆ ಹಾಗೂ ತಮ್ಮ ಖಾತೆಯ ಮೂಲಕ ಹಂತಹoತವಾಗಿ ೨೯.೧೦ ಲಕ್ಷ ರೂ. ಪಾವತಿಸಿದ್ದಾರೆ. ಇದಾದ ನಂತರ ಅವರಿಗೆ ಹೂಡಿಕೆ ಮಾಡಿದ ಹಣದ ಉಭವಾಗಲಿ, ಅಸಲನಾಗಲಿ ನೀಡದ ಪಂಚಿಸಿದ್ದಾರೆ. ವಂಚನೆಗೊಳಗಾದ ಶಿವರಾಮಕೃಷ್ಣ ನೀಡಿದ ದೂರಿನ ಮೇಲೆ ಸೈಬರ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.