ಎಲ್​ಟಿಟಿಇ ಸಂಘಟನೆಯ ಮೇಲಿನ ನಿಷೇಧ ಮತ್ತೆ ಐದು ವರ್ಷ ವಿಸ್ತರಿಸಿದ ಕೇಂದ್ರ ಗೃಹ ಸಚಿವಾಲಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲಿಬರೇಷನ್ ಆಫ್ ಟೈಗರ್ಸ್ ಆಫ್ ತಮಿಳ್ ಈಳಂ(ಎಲ್​ಟಿಟಿಇ) ಸಂಘಟನೆಯ ಮೇಲಿನ ನಿಷೇಧವನ್ನು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಮತ್ತೆ ಮುಂದಿನ ಐದು ವರ್ಷಗಳಿಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಸೆಕ್ಷನ್ 3 ರ ಉಪ-ವಿಭಾಗಗಳು (1) ಮತ್ತು (3) ಅನ್ನು ಅನ್ವಯಿಸಿ ಕೇಂದ್ರ ಗೃಹ ಸಚಿವಾಲಯವು ನಿಷೇಧಿತ ಲಿಬರೇಷನ್ ಆಫ್ ಟೈಗರ್ಸ್ ಆಫ್ ತಮಿಳ್ ಈಳಂ – ಎಲ್ ಟಿಟಿಇ ಯನ್ನು ಕಾನೂನು ಬಾಹಿರ ಸಂಘಟನೆ ಎಂದು ನಿಷೇಧಿಸಿದೆ.

ಕೇಂದ್ರ ಸರ್ಕಾರ ಈ ಮೊದಲೇ ಎಲ್ ಟಿಟಿಇ ಮೇಲೆ ನಿಷೇಧ ವಿಧಿಸಿತ್ತು. ಈ ನಿಷೇಧ ಇಂದಿನಿಂದ ಮುಂದಿನ 5 ವರ್ಷಗಳವರೆಗೆ ಅದನ್ನು ವಿಸ್ತರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಎಲ್​ಟಿಟಿಇ ಶ್ರೀಲಂಕಾ ಮೂಲದ್ದೇ ಆದರೂ ಅದರ ಬೆಂಬಲಿಗರು ಮತ್ತು ಏಜೆಂಟರು ಭಾರತದ ನೆಲದೊಳಗೆ ಇದ್ದಾರೆ. ಇವರ ಕಾರ್ಯಾಚರಣೆ ಈಗೂಲು ದೇಶದೊಳಗೆ ನಡೆಯುತ್ತಿರುವ ಸಾಧ್ಯತೆಇದೆ. ಇದು ಭಾರತದ ಸಮಗ್ರತೆ ಭದ್ರತೆಗೆ ಧಕ್ಕೆಯುಂಟು ಮಾಡುವ ಅಪಾಯವಿದ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು 1991ರಲ್ಲಿ ಎಲ್​ಟಿಟಿಇ ಸಂಘಟನೆ ಮಾನವಬಾಂಬ್​ ಸ್ಫೋಟಿಸಿ ಹತ್ಯೆಗೈದಿತ್ತು. 2009ರಲ್ಲಿ ಎಲ್​ಟಿಟಿಇ ಮುಖ್ಯಸ್ಥ ವೆಲುಪಿಲೈ ಪ್ರಭಾಕರನ್​ ಅವರನ್ನು ಕೊಂದು ಹಾಕಿತ್ತು. ಎಲ್ ಟಿಟಿಇ ಕಾನೂನು ಬಾಹಿರ ಸಂಘಟನೆಯಾಗಿರುವ ಕಾರಣ, ಸಾಧ್ಯವಾದ ಎಲ್ಲ ರೀತಿಯಲ್ಲೂ ಸಂಘಟನೆಯ ಪ್ರತ್ಯೇಕತವಾದಿ ಚಟುವಟಿಕೆಗಳನ್ನು ಎಲ್ಲ ರೀತಿಯಲ್ಲೂ ನಿಯಂತ್ರಿಸುವ ಅಗತ್ಯವಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!