Sunday, January 11, 2026

10 ತಿಂಗಳ ಮಗನಿಗೆ ವಿಷಪ್ರಾಶನ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಮೀರ್‌ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ತನ್ನ 10 ತಿಂಗಳ ಮಗನಿಗೆ ವಿಷ ನೀಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ಸುಷ್ಮಾ ಎಂದು ಗುರುತಿಸಲಾಗಿದೆ.

ಸುಷ್ಮಾ ನಾಲ್ಕು ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಯಶವಂತ್ ರೆಡ್ಡಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಯಶವರ್ಧನ್ ರೆಡ್ಡಿ ಎಂಬ 10 ತಿಂಗಳ ಮಗನಿದ್ದ. ಕುಟುಂಬ ಮೂಲಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಪತಿ-ಪತ್ನಿಯ ನಡುವೆ ನಿರಂತರವಾಗಿ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: FOOD | ಸೀಫುಡ್ ಪ್ರಿಯರಿಗೆ ಇಲ್ಲಿದೆ ಬಟರ್ ಗಾರ್ಲಿಕ್ ಸ್ಕ್ವಿಡ್ ರೆಸಿಪಿ

ಸಮಾರಂಭಕ್ಕೆ ಶಾಪಿಂಗ್ ಮಾಡಬೇಕೆಂದು ಹೇಳಿ ಸುಷ್ಮಾ ತನ್ನ ತಾಯಿ ಲಲಿತಾ ಅವರ ಮನೆಗೆ ತೆರಳಿದ್ದರು. ಅಲ್ಲಿ ಕೋಣೆಯಲ್ಲಿ ಮಗನಿಗೆ ವಿಷಪ್ರಾಶನ ಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾತ್ರಿ ಮನೆಗೆ ಬಂದ ಯಶವಂತ್ ರೆಡ್ಡಿ, ಮಲಗುವ ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿದರು. ಬಾಗಿಲು ಒಡೆದು ನೋಡಿದಾಗ ಪತ್ನಿ ಹಾಗೂ ಮಗ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!