ಹೊಸದಿಗಂತ ವರದಿ,ಕಲಬುರಗಿ:
ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ೨೦೨೪ರ ಜೂನ್ ೩ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ನಾಲ್ಕನೇ ದಿನವಾದ ಬುಧವಾರದಂದು ಐದು ಅಭ್ಯರ್ಥಿಗಳಿಂದ ಐದು ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ ಇಂತಿವೆ. ಗವಿಸಿದ್ದಪ್ಪ ಚಂದ್ರಶೇಖರ, ಕಾಶಿನಾಥ ಎಂ ಸೋಮಪ್ಪ, ಅಬ್ದುಲ್ ಜಬ್ಬಾರ್ ಅಬ್ದುಲ ರಹಮಾನ ಗೋಳಾ, ಶಶಿಧರ ಬಸವರಾಜ, ಶರಣಬಸಪ್ಪ ಶ್ರೀಮಂತಪ್ಪ ಇವರುಗಳು ಸ್ವತಂತ್ರö್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಮೇ ೧೬ ಕೊನೆಯ ದಿನವಾಗಿದೆ. ಮೇ ೧೭ ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಕೊನೆಯ ದಿನ ಮೇ ೨೦ ಇರುತ್ತದೆ. ಇಲ್ಲಿಯವರೆಗೆ ೧೪ ಅಭ್ಯರ್ಥಿಗಳಿಂದ ೧೭ ನಾಮಪತ್ರಗಳು ಸಲ್ಲಿಸಿದಂತಾಗಿದೆ.