ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀರು ಕುಡಿಯಲು ಬಂದ ಆನೆಯ ಮೇಲೆ ಮೊಸಳೆ ದಾಳಿ ನಡೆಸಿದ ಹೃದಯವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಂಬಾಬ್ವೆಯ ವಿಕ್ಟೋರಿಯಾ ಫಾಲ್ಸ್ ಸಫಾರಿ ಕ್ಲಬ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಮೊಸಳೆ ದಾಳಿಗೆ ತುತ್ತಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ.
ಆನೆ ನೀರು ಕುಡಿಯಲು ಕೆರೆಗೆ ಬಂದಾಗ ಮೊಸಳೆ ಆನೆಯ ಸೊಂಡಿಲು ಹಿಡಿದು ಭೀಕರ ದಾಳಿ ನಡೆಸಿದೆ. ಇದರಿಂದ ತಪ್ಪಿಸಿಕೊಳ್ಳಲು ಆನೆ ಪರದಾಡಿ ಕೊನೆಗೆ ಯಶಸ್ವಿಯಾಗುತ್ತದೆ. ಈ ಪ್ರಯತ್ನದ ವೇಳೆ ಆನೆಯ ಚೀರಾಟದಿಂದ ಇತರೆ ಆನೆಗಳು ಹೆದರಿಕೊಂಡು ಓಡಿಹೋಗುತ್ತವೆ.
ಮೊಸಳೆಗಳು ಹಗಲು ಮಾತ್ರವಲ್ಲದೆ ರಾತ್ರಿಯೂ ಆನೆಗಳ ಮೇಲೆ ದಾಳಿ ಮಾಡುತ್ತಿದ್ದವು. ಇಂತಹ ಅನಿರೀಕ್ಷಿತ ದಾಳಿಯಿಂದ ಬೆದರಿದ ಆನೆ ಹೆದರಿ ಓಡಿಹೋಗಿರುವುದು ದೃಶ್ಯದಲ್ಲಿ ಕಾಣಬಹುದಾಗಿದೆ.