ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ತನ್ನ ಅಭಿಯಾನ ಮುಗಿಸಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ವಾಂಗ್ ಝಿಯಿ ವಿರುದ್ಧ ಸೋತು ಹೊರಬಿದ್ದರು.
ಶುಕ್ರವಾರ ನಡೆದಿದ್ದ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಾಗುಚಿ ಅವರು ಗಾಯದ ಕಾರಣ ನಿವೃತ್ತರಾದ ಕಾರಣ ಸಿಂಧು ಸೆಮಿ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ ಸಿಂಧು 21-16, 21-15 ಅಂತರದ ಸೋಲು ಕಂಡರು.
ಕಳೆದ ವರ್ಷ ಅಕ್ಟೋಬರ್‌ನಿಂದ ಕಾಲಿನ ಗಾಯದಿಂದಾಗಿ ಪಿವಿ ಸಿಂಧು ಹೊರಗುಳಿದ ನಂತರ ಇದು ಅವರ ಮೊದಲ ಪಂದ್ಯವಾಗಿತ್ತು. ಎರಡನೇ ಗೇಮ್‌ನಲ್ಲಿ ಸಿಂಧು 11-6 ಮುನ್ನಡೆ ಸಾಧಿಸಿದರೂ ಇದೇ ಲಯ ಮುಂದುವರಿಸುವಲ್ಲಿ ವಿಫಲರಾದರು.


