ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರ ಫೋನ್ ಟ್ಯಾಪ್ ಮಾಡಲ್ಲ. ಮಾಡಲು ಅವರೇನು ಭಯೋತ್ಪಾದಕರೇ. ಅವರು ರಾಜಕೀಯ ನಾಯಕರು. ಅವರ ಫೋನ್ ಟ್ಯಾಪ್ ಯಾಕೆ ಮಾಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪ್ರಶ್ನಿಸಿದ್ದಾರೆ.
ನನ್ನ ಮತ್ತು ರೇವಣ್ಣನ (HD Revanna) ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂಬ ಹೆಚ್ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಭಯೋತ್ಪಾದಕರ ಫೋನನ್ನು ಅನುಮತಿ ಪಡೆದು ಟ್ಯಾಪ್ ಮಾಡಲಾಗುತ್ತದೆ. ಇವರು ನಮ್ಮ ರಾಜ್ಯದ ನಾಯಕರು, ಇವರ ಫೋನ್ ಟ್ಯಾಪ್ ಮಾಡುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ಕೇವಲ ಪ್ರಚಾರಕ್ಕಾಗಿ ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಯಾರಿಗೂ ನಾನು ಏನೂ ಕೊಟ್ಟಿಲ್ಲ. ನಾನು ರಾಜಕಾರಣಿ ನನ್ನ ಭೇಟಿ ಮಾಡಲು ಬಿಜೆಪಿಯವರು ಸೇರಿ ನೂರಾರು ಜನ ಬರುತ್ತಾರೆ. ಬರುವ ಮೊದಲು ಸಮಯ ಕೇಳುತ್ತಾರೆ. ದೇವರಾಜೇಗೌಡ ಬಿಜೆಪಿಯವರೇ. ಅವರು ನನ್ನನ್ನು ಭೇಟಿ ಮಾಡಬೇಕು ಎಂದು ಕೇಳಿದ್ದರು. ಆದರೆ ನಾನು ಸಮಯ ಕೊಟ್ಟಿಲ್ಲ. ಅರ್ಧ ನಿಮಿಷವೂ ನಾನು ಮಾತನಾಡಿಲ್ಲ ಎಂದು ತಿಳಿಸಿದರು.