ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮಳೆಯ ಆಗಮನವಾಗಿದೆ. ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕರಾವಳಿ, ಶಿವಮೊಗ್ಗ, ಚಿತ್ರದುರ್ಗ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ.
ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ದಾವಣಗೆರೆ, ಹಾವೇರಿ, ಗದಗ, ಧಾರವಾಡ, ಉತ್ತರ ಕನ್ನಡದಲ್ಲೂ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ. ಬೆಂಗಳೂರಿನಲ್ಲಿ ಇಂದು ಕೂಡ ಮಳೆಯಾಗಲಿದ್ದು, ಮೇ 24ರಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಲಿದೆ.
ಯಲ್ಲಾಪುರ, ಎಚ್ಡಿಕೋಟೆ, ಕೊಳ್ಳೇಗಾಲ, ಸಿರಾ, ಯುಗಟಿಯಲ್ಲಿ ಹೆಚ್ಚು ಮಳೆಯಾಗಿದೆ. ಹೊನ್ನಾವರ, ದೇವನಹಳ್ಳಿ, ಶ್ರವಣಬೆಳಗೊಳ, ಭಾಗಮಂಡಲ, ಕಿರವತ್ತಿ, ಮಂಗಳೂರು, ಹಗರಿಬೊಮ್ಮನಹಳ್ಳಿ, ಹೊಸದುರ್ಗಾ, ಚನ್ನರಾಯಪಟ್ಟಣ, ಶಿವಮೊಗ್ಗ, ದಾವಣಗೆರೆ, ಮಾಣಿ, ಸಂತೆಬೆನ್ನೂರು, ಹರಪನಹಳ್ಳಿ, ಮಂಕಿ, ನಿಪ್ಪಾಣಿ, ಬರಗೂರು, ಸಂಡೂರು, ಹೊಸಕೋಟೆ, ಪರಶುರಾಂಪುರ, ಕೂಡ್ಲಿಗಿ, ಸುಳ್ಯ, ಧರ್ಮಸ್ಥಳ, ಕದ್ರಾ, ಕಡೂರು, ಎನ್ಆರ್ಪುರ, ಉಪ್ಪಿನಂಗಡಿ, ಹಳಿಯಾಳ, ಮೂಡಿಗೆರೆ, ಮುಂಡಗೋಡು, ಸಿಂಧನೂರು, ಹುಣಸೂರು, ಕೊಟ್ಟೂರು, ಕೃಷ್ಣರಾಜಪೇಟೆ, ಗೌರಿಬಿದನೂರು, ಹೆಬ್ಬೂರು, ನಾಪೋಕ್ಲು, ನಾಗಮಂಗಲ, ಕುಶಾಲನಗರ, ಚಿತ್ರದುರ್ಗ, ಮಾಗಡಿ, ಬೇಲೂರು, ವಿರಾಜಪೇಟೆಯಲ್ಲಿ ಮಳೆಯಾಗಿದೆ.