ದಿನಭವಿಷ್ಯ: ನಿಮ್ಮ ಲೆಕ್ಕಾಚಾರದಲ್ಲಿ ತಪ್ಪಾದೀತು, ಕಾರ್ಯ ವಿಳಂಬ

ಮೇಷ
ಇಂದು ಲೆಕ್ಕಾಚಾರದಲ್ಲಿ ತಪ್ಪಾದೀತು. ಹಾಗಾಗಿ ಮುಖ್ಯ ಕಾರ್ಯದಲ್ಲಿ ಎಡವಟ್ಟಾಗಬಹುದು. ಆದರೆ ನಿಮ್ಮ ಪ್ರಗತಿಗೆ ಯಾವುದೇ ಅಡ್ಡಿ ಉಂಟಾಗದು

ವೃಷಭ
ಮಕ್ಕಳ ಕುರಿತಂತೆ ಅಪ್ರಿಯ ಬೆಳವಣಿಗೆ ಉಂಟಾದೀತು. ಕಾಳಜಿಯಿಂದ ನಿಭಾಯಿಸಿರಿ. ನಿಮ್ಮ ಪ್ರಯಾಣದ ಯೋಜನೆ ಹಳಿ ತಪ್ಪಬಹುದು.

ಮಿಥುನ
ಇತರರಿಂದ ನಿಮ್ಮ ಕಾರ್ಯಕ್ಕೆ ಪ್ರೇರಣೆ ಪಡೆಯುವಿರಿ. ನಿಮ್ಮ ಕಾರ್ಯಶೈಲಿಗೆ ಮೆಚ್ಚುಗೆ ಲಭಿಸಲಿದೆ. ಕುಟುಂಬದಲ್ಲಿ ಭಿನ್ನಮತ ಉಂಟಾದೀತು.

ಕಟಕ
ಹಣಕಾಸು ಸಮಸ್ಯೆ ಉಂಟಾದೀತು. ಅನವಶ್ಯ ಖರ್ಚು ನಿಯಂತ್ರಿಸಿ. ಮಾತಿನಲ್ಲೆ ಮರುಳು ಮಾಡುವ ವ್ಯಕ್ತಿಗಳ ಕುರಿತು ಎಚ್ಚರದಿಂದಿರಿ. ಮೋಸ ಹೋಗದಿರಿ.

ಸಿಂಹ
ಇತರರ ಉತ್ತಮ ಸಲಹೆ ಪಾಲಿಸಲೂ ನಿಮ್ಮ ಬಿಗುಮಾನ ಅಡ್ಡ ಬರುವುದು. ಅಹಂ ತೊರೆದು ವರ್ತಿಸಿದರೆ  ಒಳಿತಾಗಲಿದೆ. ಕೌಟುಂಬಿಕ ಸಹಕಾರ.

ಕನ್ಯಾ
ಕೆಲಸದಲ್ಲಿ ಇಂದು ಏಕಾಗ್ರತೆ ಮೂಡದು. ಮನೆ ಮತ್ತು ಆತ್ಮೀಯರ ಕುರಿತಂತೆ ಹೆಚ್ಚು ಯೋಚಿಸುವಿರಿ. ದಿನದಂತ್ಯಕ್ಕೆ ಶುಭ ಬೆಳವಣಿಗೆ ಕಾಣುವಿರಿ.

ತುಲಾ
ಯಾವುದಾದರೂ ಬಿಕ್ಕಟ್ಟು ಕಾಡುತ್ತಿದ್ದರೆ ಇಂದು ಪರಿಹಾರ ಕಾಣಲಿದೆ. ಇತರರ ಸಲಹೆಗೆ ಕಿವಿಗೊಡಲು ಮರೆಯದಿರಿ. ಆರ್ಥಿಕ ಸಮಸ್ಯೆ ನಿವಾರಣೆ.

ವೃಶ್ಚಿಕ
ಮನೆ ಅಥವಾ ಕೆಲಸದ ಜಾಗದಲ್ಲಿ ಇಂದು ಬಿಕ್ಕಟ್ಟು ಎದುರಿಸುವಿರಿ. ಅದನ್ನು ನಿಭಾಯಿಸುವ ಕಲೆ ನಿಮಗೆ ತಿಳಿದಿದೆ. ದುಡುಕುತನ ತೋರದೆ ನಿಭಾಯಿಸಿ.

ಧನು
ಇಂದು ಅದೃಷ್ಟ ನಿಮ್ಮ ಜತೆಗಿಲ್ಲ. ಹಾಗಾಗಿ ನಿಮ್ಮ ಬದುಕಿನಲ್ಲಿ ಯಾವುದಾದರೂ ಬದಲಾವಣೆಗೆ ಯೋಜಿಸಿದ್ದರೆ  ಮುಂದೂಡಿ.

ಮಕರ
ಮನಸ್ಸು ಕೆಡಿಸುವ ಪ್ರಸಂಗ ಉಂಟಾದೀತು. ಅದರಿಂದ ಹೊರಬಂದು ನಿಮ್ಮ ಕರ್ತವ್ಯಕ್ಕೆ ಗಮನ ಕೊಡಿ. ನಿಮ್ಮ ಗುರಿಯತ್ತ ಗಮನ ಕೇಂದ್ರೀಕರಿಸಿ. ಸೂಕ್ತ ಸಹಕಾರ ಲಭ್ಯ.

ಕುಂಭ
ಪ್ರೀತಿಯ ವಿಷಯದಲ್ಲಿ ಅವಸರ ತೋರದಿರಿ. ಹಿರಿಯರ ಹಿತವಚನ ಕೇಳಿ. ನಿಮ್ಮ ಬದುಕಿನಲ್ಲಿ ಸಾಧಿಸಲು ಇನ್ನೂ ಬಹಳಷ್ಟಿದೆ. ಅತ್ತ ಗಮನ ಕೊಡುವುದೊಳಿತು.

ಮೀನ
ಏರುಪೇರಿನ ದಿನ. ಮಾನಸಿಕವಾಗಿಯೂ ಕುಂದುತ್ತೀರಿ. ಏನೋ ಕೊರಗು ಕಾಡುವುದು.  ಕಾರ್ಯದಲ್ಲಿ ವಿಳಂಬ. ನಾಳೆಯ ಕುರಿತು ಆಶಾವಾದವಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!