ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದುಬೈಗೆ ತೆರಳಿ ಇವರು ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೇಟ್ ಮಾಡಿದ್ದಾರೆ. ವಿಜಯಲಕ್ಷ್ಮಿ ತಮ್ಮ ಆನಿವರ್ಸರಿ ಆಚರಣೆಯ ಪೋಸ್ಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ.
ಈ ಮಧ್ಯೆ ನಟಿ ಪವಿತ್ರಾ ಗೌಡ ಅವರು ನಿಗೂಡಾರ್ಥದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.ದರ್ಶನ್ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಕ್ಕೂ, ಇದಕ್ಕೂ ಕೆಲವರು ಲಿಂಕ್ ಕಲ್ಪಿಸುತ್ತಿದ್ದಾರೆ.
ಕರ್ಮ ಅನ್ನೋದು ಹೊರೆ ಇದ್ದಂತೆ. ಸಣ್ಣವರಿದ್ದಾಗ ಹಿರಿಯರು ಹೇಳ್ತಿದ್ರು, ಹೀಗೆಲ್ಲ ಮಾಡ್ತಿದ್ದೀಯಾ ಅದು ಮುಂದಿನ ಜನ್ಮಕ್ಕೆ ಕ್ಯಾರಿ ಆಗುತ್ತದೆ ಎನ್ನುತ್ತಿದ್ದರು. ಈಗ ಹಾಗಿಲ್ಲ, ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎಂದು ದರ್ಶನ್ ಹೇಳಿರುವ ವಿಡಿಯೋವನ್ನು ಪವಿತ್ರಾ ಗೌಡ ಶೇರ್ ಮಾಡಿಕೊಂಡಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಆನಿವರ್ಸರಿಗೂ ಪವಿತ್ರಾ ಪೋಸ್ಟ್‌ಗೂ ಅಭಿಮಾನಿಗಳು ಲಿಂಕ್ ಮಾಡಿದ್ದಾರೆ.