SHOCKING | ವೇದಾ, ಭಜರಂಗಿ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಬರ್ಬರ ಹತ್ಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲ್ಲೂಕು ತುರಗನೂರು ಗ್ರಾಮದಲ್ಲಿ ಖ್ಯಾತ ನಟಿಯ ಬರ್ಬರ ಹತ್ಯೆಯಾಗಿದೆ.

ಕೌಟುಂಬಿಕ ಕಲಹ ಹಿನ್ನೆಲೆ ನಟಿ ವಿದ್ಯಾ ತನ್ನ ಪತಿಯ ಕೈಯಾರೆ ಹತ್ಯೆಗೀಡಾಗಿದ್ದಾಳೆ. ಪತಿ ನಂದೀಶ್ ಎಂಬಾತ ಆಕೆಯನ್ನು ಕೊಲೆ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಕೊನೆಗೆ ವಿದ್ಯಾ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ.

ವಿದ್ಯಾ ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಚಿರಂಜೀವಿ ಸರ್ಜಾ ಜೊತೆ ಅಜಿತ್, ಶಿವಣ್ಣನ ಜೊತೆ ವೇದಾ , ಭಜರಂಗಿ ಚಿತ್ರದಲ್ಲಿ ವಿದ್ಯಾ ನಟಿಸಿದ್ದಾರೆ. ಪೋಷಕ ಪಾತ್ರದಲ್ಲಿ  ಮಿಂಚಿದ್ದರು. ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!