ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್‌ನಲ್ಲಿ ಹಲವು ಬದಲಾವಣೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಜೂನ್ 4ರ ನಂತರ ಕಾಂಗ್ರೆಸ್ ನಲ್ಲಿ ಹಲವು ಬದಲಾವಣೆ ಆಗಲಿದೆ. ಸಿಎಂ ಹಾಗೂ ಡಿಸಿಎಂ ನಡುವಿನ ಆಂತರಿಕ ಕಲಹ, ಸಚಿವರ ಅತೃಪ್ತಿಯಿಂದ ಸರ್ಕಾರ ಪತನವಾಗಲಿದೆ ಎಂದರು.
ಡಿಕೆಶಿ ಹೇಳಿಕೆ ನೋಡಿದರೆ ಶಿವಕುಮಾರ್ ವೈಯಕ್ತಿಕ ಪ್ರತಿಷ್ಠೆಗಾಗಿ ಪೈಪೋಟಿ ತೀವ್ರಗೊಂಡಿರುವುದು ಚುನಾವಣೆ ವೇಳೆಗೆ ತಿಳಿಯಲಿದೆ. ಹಲವು ಸಚಿವರು ತಾವೇ ಸ್ಪರ್ಧಿಸುವ ಬದಲು ತಮ್ಮ ಮಕ್ಕಳನ್ನು ಲೋಕಸಭೆ ಚುನಾವಣೆಗೆ ನಾಮನಿರ್ದೇಶನ ಮಾಡಿದ್ದಾರೆ. ಇದು ಅವರ ನಿರಾಶೆಯ ಮತ್ತೊಂದು ಸಂಕೇತವಾಗಿದೆ. ರಾಜ್ಯದಲ್ಲಿನ ರಾಜಕೀಯ ವಾತಾವರಣ ತಮಗೆ ಪ್ರತಿಕೂಲವಾಗಿದೆ ಎಂಬುದು ಅವರಿಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.