ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಗಿ ಜನ ಪರಿತಪಿಸುತ್ತಿದ್ದರು, ಅಂತೆಯೇ ಮಳೆ ಸುರಿಯುತ್ತಿದ್ದು, ಇದೀಗ ಸಾಕಷ್ಟು ಸಮಸ್ಯೆ ಎದುರಾಗಿದೆ.
ಮಳೆ ಬಂದರೆ ಸಾಕು ಎನ್ನುತ್ತಿದ್ದ ಬೆಂಗಳೂರಿನ ಜನರು ಇದೀಗ ಮಳೆ ಬಂದಾಗ ರಸ್ತೆಗಿಳಿಯಲು ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗಾಳಿ-ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳಿಂದ ವಾಹನಗಳಿಗೆ ಹಾನಿಯಾದರೂ ಬೆಸ್ಕಾಂ ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಈವರೆಗೂ ಮಳೆಗೆ ಒಟ್ಟಾರೆ 800 ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.
ಇತ್ತ ವಿದ್ಯುತ್ ಕಂಬಗಳು ವಾಲಿರೋದನ್ನು ಒಪ್ಪಿಕೊಂಡಿರುವ ಬೆಸ್ಕಾಂ, ಮಳೆ ಇರುವುದರಿಂದ ಒಂದಷ್ಟು ಕಡೆ ಈ ರೀತಿ ಸಮಸ್ಯೆಗಳು ಆಗುತ್ತವೆ, ಸರಿಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಮಳೆ-ಗಾಳಿಗೆ 9. 19 ಕೋಟಿ ರೂ. ನಷ್ಟವಾಗಿದೆ. ಗ್ರಾಹಕರಿಗೆ ವಿದ್ಯುತ್ ನೀಡಬೇಕಿರುವುದರಿಂದ ಮಳೆ ಕಡಿಮೆಯಾದಾಗ ಸರಿಪಡಿಸುತ್ತೇವೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಹೇಳಿದ್ದಾರೆ.