March 15, 2026
Sunday, March 15, 2026
spot_img

ನ್ಯಾಯ ಸಿಗದಿದ್ದರೆ ಸಿಬಿಐ ಹೋರಾಟ ಖಚಿತ: ಬಳ್ಳಾರಿ ಗಲಾಟೆ ಕುರಿತು ಸೋಮಶೇಖರ್ ರೆಡ್ಡಿ ಗುಡುಗು

ಹೊಸದಿಗಂತ ಬಳ್ಳಾರಿ

ಬಳ್ಳಾರಿ ಹಿಂಸಾಚಾರದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿರುವುದನ್ನು ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಸ್ವಾಗತಿಸಿದ್ದಾರೆ. ಆದರೆ, ಈ ತನಿಖೆಯ ಕುರಿತು ಅವರು ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ತನಿಖೆಯು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ, ಪಾರದರ್ಶಕವಾಗಿ ನಡೆಯಬೇಕು. ಡಿವೈಎಸ್ಪಿ ಅವರ ಸ್ವಯಂ ಪ್ರೇರಿತ ದೂರಿನಲ್ಲಿ ಶಾಸಕ ಭರತ್ ರೆಡ್ಡಿ ಅವರ ಹೆಸರಿದ್ದರೂ, ಅವರನ್ನು ಇದುವರೆಗೂ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಿಐಡಿ ತನಿಖೆಯಲ್ಲಿ ಲೋಪ ಕಂಡುಬಂದರೆ ಅಥವಾ ರಾಜಕೀಯ ಹಸ್ತಕ್ಷೇಪವಾದರೆ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಘಟನೆಯನ್ನು ಖಂಡಿಸಿ ಜನವರಿ 17 ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !