September 26, 2026
Saturday, September 26, 2026
spot_img

ಶಿರಡಿ ಸಾಯಿಬಾಬಾನ ದರುಶನ ಪಡೆದ ನಟ ವಿಜಯ್​: ಚುನಾವಣೆಯಲ್ಲಿ ಗೆಲುವಿಗಾಗಿ ಪ್ರಾರ್ಥನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ವಿಧಾನಸಭಾ ಚುನಾವಣೆಗೆ ಮತದಾನ ನಡೆದು ಎಲ್ಲಾ ರಾಜಕೀಯ ನಾಯಕರು ಫಲಿತಾಂಶವನ್ನು ಎದುರು ನೋಡುತ್ತಿದ್ದು, ಇದರ ನಡುವೆ ನಟ, ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ದಳಪತಿ ಅವರು ಇಂದು ಶಿರಡಿ ಸಾಯಿಬಾಬಾರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು.

ಮೇ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಈ ಬೆನ್ನಲ್ಲೇ ತಮ್ಮ ಪಕ್ಷದ ಯಶಸ್ಸಿಗಾಗಿ ಪ್ರಾರ್ಥಿಸಲು ಸಾಯಿಬಾಬಾ ಅವರ ಸನ್ನಿಧಿಗೆ ಆಗಮಿಸಿದರು.

ಸಾಯಿಬಾಬಾ ಅವರ ಸಮಾಧಿಗೆ ತೆರಳಿ ಅಲ್ಲಿ ಪೂಜಿಸಿದರು. ಈ ವೇಳೆ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋರಖ್ ಗಾಡಿಲ್ಕರ್ ಅವರು ವಿಜಯ್ ಅವರಿಗೆ ಶಾಲು ಮತ್ತು ಸಾಯಿಬಾಬಾ ಅವರ ವಿಗ್ರಹವನ್ನು ನೀಡಿ ಸನ್ಮಾನಿಸಿದರು.

ಬಳಿಕ ದೇವಾಲಯ ಸಂಕೀರ್ಣದೊಳಗೆ ಇರುವ ಧ್ಯಾನ ಮಂದಿರಕ್ಕೆ ತೆರಳಿದರು. ಅಲ್ಲಿ ಅವರು ಸ್ವಲ್ಪ ಸಮಯ ಧ್ಯಾನ ಮಾಡಿದರು.

Must Read