ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಕಸಿತ ಭಾರತದ ಗುರಿಗೆ ದೈವ ಪ್ರೇರಣೆಯಿದೆ, ಅದೇ ನನ್ನ ಶಕ್ತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಯಾವುದೋ ಮಹತ್ತರ ಕಾರ್ಯಕ್ಕಾಗಿ ಆ ದೇವರೇ ನನ್ನನ್ನು ಕಳುಹಿಸಿದ್ದಾನೆ. ದೇವರು ನನ್ನ ಕೈಹಿಡಿದು ನಡೆಸುತ್ತಿದ್ದಾನೆ ಎನಿಸುತ್ತದೆ. ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡಲು 2047ರವರೆಗೂ ನಾನು 24 ಗಂಟೆ ಕೆಲಸ ಮಾಡಬೇಕು. ಅದಕ್ಕಾಗಿ ಆ ದೇವರೇ ತನಗೆ ಚೈತನ್ಯ ನೀಡುತ್ತಿದ್ದಾನೆ. 2047ರೊಳಗೆ ವಿಕಸಿತ ದೇಶವನ್ನಾಗಿಸುವ ಗುರಿ ಈಡೇರುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದಿದ್ದಾರೆ.
ಭಾರತದ ಜಿಡಿಪಿ 2047ರೊಳಗೆ 35 ಟ್ರಿಲಿಯನ್ ಡಾಲರ್ ಮಟ್ಟ ಮುಟ್ಟಬೇಕೆಂದೂ ಗುರಿ ಇಟ್ಟಿದೆ. ಭಾರತ ವಿಕಸಿತ ಅಥವಾ ಮುಂದುವರಿದ ದೇಶವಾಗಬೇಕಾದರೆ ಅಷ್ಟು ಜಿಡಿಪಿ ಸಾಧನೆ ಅವಶ್ಯವಾಗಿದೆ.