Cannes Film Festivalನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡಿಗರನ್ನು ಹೊಗಳಿದ ಯಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾನ್ ಫಿಲ್ಮ್ ಫೆಸ್ಟಿವೆಲ್‌ನಲ್ಲಿ ಮೈಸೂರಿನ ಚಿದಾನಂದ ನಾಯ್ಕ್ ನಿರ್ದೇಶನದ  ‘ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ’ (The sunflowers were the first ones to know) ಕಿರುಚಿತ್ರ ಮೊದಲ ಬಹುಮಾನವನ್ನು ಪಡೆದಿದೆ.

ಈ ಫೆಸ್ಟಿವೆಲ್‌ಗೆ ಆಯ್ಕೆಯಾದ ಮೊದಲ ಕನ್ನಡಿಗರ ಕಿರುಚಿತ್ರ ಇದಾಗಿದ್ದು, ಇದೀಗ ಮೊದಲ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿರುವ ಚಿದಾನಂದ ಸಾಧನೆಗೆ ನ್ಯಾಷನಲ್ ಸ್ಟಾರ್ ಯಶ್ ಹಾಡಿ ಹೊಗಳಿದ್ದಾರೆ.

ಚಿದಾನಂದ ನಾಯಕ್‌ಗೆ ಅಭಿನಂದನೆಗಳು. ಕಾನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರಕ್ಕಾಗಿ ‘ಲಾ ಸಿನೆಫ್’ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ‘ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ’ ಚಿತ್ರಕ್ಕೆ ಅಭಿನಂದನೆಗಳು ಎಂದು ಯಶ್ ಶುಭಕೋರಿದ್ದಾರೆ. ನೀವು ಕನ್ನಡ ಜಾನಪದವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ಯುವುದನ್ನು ಮತ್ತು ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡಗಳನ್ನು ಹೊಂದಿಸುವುದನ್ನು ನೋಡಲು ಹೆಮ್ಮೆಪಡುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!