ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಕೋಟಾದಲ್ಲಿ ವೇಗವಾಗಿ ಬೈಕ್ ಚಲಾಯಿಸುತ್ತಾ ಜತೆಗೆ ರೊಮ್ಯಾನ್ಸ್ ಮಾಡುತ್ತಿದ್ದ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ನಲ್ಲಿ ರೊಮ್ಯಾನ್ಸ್ ಮಾಡುತ್ತಾ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಮೊಹಮ್ಮದ್ ವಾಸಿಂ ಹಾಗೂ ಜತೆಗಿದ್ದ ಯುವತಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಪ್ರಸ್ತುತಪಡಿಸಲಾಗುತ್ತಿದೆ. ಬಂಧನಕ್ಕೊಳಗಾದ ನಂತರ, ಪೊಲೀಸರು ಇಬ್ಬರ ವಿಡಿಯೋವೊಂದನ್ನು ಚಿತ್ರಿಸಿ ಅದರಲ್ಲಿ ಯಾರೂ ಕೂಡ ಈ ರೀತಿ ಮಾಡಬೇಡಿ ಎಂದು ಹೇಳಿ ಕ್ಷಮೆಯಾಚಿಸುವಂತೆ ಮಾಡಿದ್ದಾರೆ.
ख़तरनाक।
सोचिए ये इनके लिए मज़ा है।
लेकिन जरा सी भी चूक होते ही इनके घर के बाहर सफ़ेद टेंट और दरी बिछ सकती है। pic.twitter.com/YbUW4EMzqX
— Sagar Kumar “Sudarshan News” (@KumaarSaagar) May 23, 2024