ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಫೈನಲ್ ಮುಗಿದಿದೆ. ಕೆಕೆಆರ್ ಸುಲಭ ಜಯ ಸಾಧಿಸಿದೆ. ಎಸ್ಆರ್ಎಚ್ ಒಳ್ಳೆಯ ತಂಡವೇ ಆಗಿತ್ತು. ಇತರ ತಂಡಗಳೊಂದಿಗೆ ಅವರು ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದ್ದರು. ಆದರೆ, ಫಿನಾಲೆಯಲ್ಲಿ ಅವರ ಆಟ ನಿರಾಶಾದಾಯಕವಾಗಿತ್ತು. ಎಸ್ಆರ್ಎಚ್ ಒಡತಿ ಕಾವ್ಯಾ ಮಾರನ್ ಕಣ್ಣೀರಿಟ್ಟಿದ್ದಾರೆ. ಅದನ್ನು ನೋಡಿದೆ, ಎದೆಗುಂದಬೇಡಿ. ಮತ್ತೆ ನಾಳೆ ಹೊಸತನ ಬರಲಿದೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ಫೈನಲ್ ಪಂದ್ಯ ಎಂದಾಗ ಎಲ್ಲರೂ ದೊಡ್ಡ ಸ್ಕೋರ್ ಮಾಡಲು ಬಯಸುತ್ತಾರೆ. ಎಸ್ಆರ್ಎಚ್ ಕೂಡ ಇದೇ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿದಿತ್ತು. ಆದರೆ, ಪ್ರಮುಖ ಆಟಗಾರರೇ ಫ್ಲಾಪ್ ಆದರು. ಈ ಮೂಲಕ ಎಸ್ಆರ್ಎಚ್ 113 ರನ್ಗಳಿಗೆ ತಂಡ ಆಲ್ಔಟ್ ಆಯಿತು. 114 ರನ್ಗಳ ಟಾರ್ಗೆಟ್ನ ಕೇವಲ 10 ಓವರ್ಗಳಲ್ಲಿ ಎಸ್ಆರ್ಎಚ್ ಚೇಸ್ ಮಾಡಿದರು.