ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶಿ ಸಂಸ್ಕೃತಿಯಾದ ಡೇಟಿಂಗ್ ಪರಿಕಲ್ಪನೆ ಇದೀಗ ಭಾರತಕ್ಕೂ ಕಾಲಿಟ್ಟಿದೆ, ಡೇಟಿಂಗ್‌ಗೆ ಬಾಡಿಗೆಗೆ ಜನ ಸಿಗುವ ಬಗ್ಗೆ ಬೇರೆ ದೇಶಗಳ ಸುದ್ದಿಗಳನ್ನು ನೀವು ಓದಿರುತ್ತೀರಿ. ಆದರೆ ಇದೀಗ ಭಾರತದಲ್ಲಿಯೇ ಈ ಟ್ರೆಂಡ್ ಆರಂಭವಾಗಿದೆ.
ವಿದೇಶದಲ್ಲಿ ಕಂಡುಬಂದ ಇಂತಹ ಪರಿಕಲ್ಪನೆ ಭಾರತದಕ್ಕೂ ಕಾಲಿಟ್ಟಿದೆ. ಭಾರತೀಯ ಯುವತಿಯೊಬ್ಬಳು ತಾನು ಬಾಡಿಗೆ ಸಿಗುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾಳೆ. ಜೊತೆಗೆ ಬಾಡಿಗೆ ಪಡೆಯುವುದಕ್ಕೂ ಮುನ್ನ ಆಕೆಗೆ ಹಣವನ್ನು ನೀಡಬೇಕಾಗಿದೆ. ಅದಕ್ಕೆಂದೇ ಲಿಸ್ಟ್ ತಯಾರಿಸಿಕೊಂಡಿದ್ದಾಳೆ.
ದಿವ್ಯಾ ಗಿರಿ ಎಂಬಾಕೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾಳೆ. ನೆನಪಿನಲ್ಲಿ ಉಳಿಯುವಂತೆ ನಿಮಗಾಗಿ ದಿನ ಬಾಡಿಗೆಗೆ ಸಿಗುತ್ತೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದಾಳೆ. ಜೊತೆಗೆ ಡೇಟ್ ಮಾಡಲು ಬೇಕೆನಿಸಿದರೆ ಬಾಡಿಗೆ ನೀಡಬೇಕು ಎಂದು ಬರೆದುಕೊಂಡಿದ್ದಾಳೆ. ಅದಕ್ಕಾಗಿ ಲಿಸ್ಟ್ ಅನ್ನೇ ತಯಾರಿಸಿದ್ದಾಳೆ.