ಕಾಫಿ ಡೇಟ್‌ಗೆ ಒಂದೂವರೆ ಸಾವಿರ..ʼಬಾಡಿಗೆಗೆ ಇದ್ದೇನೆʼ ಎಂದು ಪೋಸ್ಟ್‌ ಹಾಕಿದ ಭಾರತೀಯ ಯುವತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿದೇಶಿ ಸಂಸ್ಕೃತಿಯಾದ ಡೇಟಿಂಗ್​ ಪರಿಕಲ್ಪನೆ ಇದೀಗ ಭಾರತಕ್ಕೂ ಕಾಲಿಟ್ಟಿದೆ, ಡೇಟಿಂಗ್‌ಗೆ ಬಾಡಿಗೆಗೆ ಜನ ಸಿಗುವ ಬಗ್ಗೆ ಬೇರೆ ದೇಶಗಳ ಸುದ್ದಿಗಳನ್ನು ನೀವು ಓದಿರುತ್ತೀರಿ. ಆದರೆ ಇದೀಗ ಭಾರತದಲ್ಲಿಯೇ ಈ ಟ್ರೆಂಡ್‌ ಆರಂಭವಾಗಿದೆ.

ವಿದೇಶದಲ್ಲಿ ಕಂಡುಬಂದ ಇಂತಹ ಪರಿಕಲ್ಪನೆ ಭಾರತದಕ್ಕೂ ಕಾಲಿಟ್ಟಿದೆ. ಭಾರತೀಯ ಯುವತಿಯೊಬ್ಬಳು ತಾನು ಬಾಡಿಗೆ ಸಿಗುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾಳೆ. ಜೊತೆಗೆ ಬಾಡಿಗೆ ಪಡೆಯುವುದಕ್ಕೂ ಮುನ್ನ ಆಕೆಗೆ ಹಣವನ್ನು ನೀಡಬೇಕಾಗಿದೆ. ಅದಕ್ಕೆಂದೇ ಲಿಸ್ಟ್​ ತಯಾರಿಸಿಕೊಂಡಿದ್ದಾಳೆ.

ದಿವ್ಯಾ ಗಿರಿ ಎಂಬಾಕೆ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾಳೆ. ನೆನಪಿನಲ್ಲಿ ಉಳಿಯುವಂತೆ ನಿಮಗಾಗಿ ದಿನ ಬಾಡಿಗೆಗೆ ಸಿಗುತ್ತೇನೆ ಎಂದು ಪೋಸ್ಟ್​ ಹಂಚಿಕೊಂಡಿದ್ದಾಳೆ. ಜೊತೆಗೆ ಡೇಟ್​ ಮಾಡಲು ಬೇಕೆನಿಸಿದರೆ ಬಾಡಿಗೆ ನೀಡಬೇಕು ಎಂದು ಬರೆದುಕೊಂಡಿದ್ದಾಳೆ. ಅದಕ್ಕಾಗಿ ಲಿಸ್ಟ್ ಅನ್ನೇ ತಯಾರಿಸಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!