ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ದೇಶದ ಕೆಲವು ರಾಜ್ಯಗಳಲ್ಲಿ ಈಗಲೂ ಬಿಸಿಲ ಝಳ ಹೆಚ್ಚೇ ಇದ್ದು, ಜನರು ತಣ್ಣಗಿರಲು ಒಂದಲ್ಲಾ ಒಂದು ಆಲ್ಟರ್‌ನೇಟಿವ್ ಹುಡುಕುತ್ತಿದ್ದಾರೆ.
ದೆಹಲಿಯ ವ್ಯಕ್ತಿಯೊಬ್ಬರು ತಮ್ಮ ಮನೆಯ ಶೌಚಾಲಯಕ್ಕೆ ಎಸಿ ಅಳವಡಿಸಿದ್ದು, ಸದ್ಯ ಶೌಚಾಲಯದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಬಾತ್‌ರೂಮ್‌ನಲ್ಲಿ ಗಂಡಸರು ಹೆಚ್ಚಿನ ಸಮಯ ಕಳೆಯುತ್ತಾರೆ, ಫೋನ್‌ನಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ನೋಡಿಕೊಂಡು ಟೈಮ್‌ಪಾಸ್ ಮಾಡ್ತಾರೆ ಹಾಗೂ ನೆಮ್ಮದಿಯ ಸಮಯವನ್ನು ಕಳೆಯುತ್ತಾರೆ ಎಂದೆಲ್ಲಾ ತಮಾಷೆ ಮಾಡಲಾಗುತ್ತದೆ. ಅದಕ್ಕೆ ಹೇಳಿಮಾಡಿಸಿದಂಥ ವಾಶ್‌ರೂಮ್ ಇದಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಭಾರೀ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ, ‘ಇದು ನನ್ನ ಕನಸಿನ ವಾಶ್‌ರೂಮ್ ಬ್ರದರ್’ ಎಂದು ಬರೆದಿದರೆ, ಮತ್ತೊಬ್ಬರು ಮೊಬೈಲ್ ಚಾರ್ಚ್ ಸ್ವಿಚ್ ಬೋರ್ಡ್ ಕೂಡ ಅಳವಡಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
View this post on Instagram