Sunday, January 11, 2026

ಮನೆಯ ಬೆಡ್ ರೂಮ್ ನಲ್ಲಿತ್ತು 134 ಗ್ರಾಂ ಗಾಂಜಾ: ಬಚ್ಚಿಟ್ಟಿದ್ದ ಡಾಕ್ಟರ್ ಅರೆಸ್ಟ್

ಹೊಸದಿಗಂತ ವರದಿ ಬೆಳಗಾವಿ:

ವೈದ್ಯನೊಬ್ಬನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಗಾಂಜಾ ಪತ್ತೆಯಾಗಿದ್ದು, ಖಚಿತ ಮಾಹಿತಿ ಮೇರೆಗೆ ಮಾಳಮಾರುತಿ ಪೊಲೀಸರು ವೈದ್ಯನ ಮೆನೆಯ ಮೇಲೆ ದಾಳಿ ಮಾಡಿ ಗಾಂಜಾ ಸಹಿತ ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದ, ರಾಹುಲ್ ಬಂಟಿ ಗಾಂಜಾ ಸೇವನೆ ಮಾಡಿ ರೋಗಿಗಳ ತಪಾಸಣೆ ನಡೆಸುತ್ತಿದ್ದರು ಎಂಬ ಆರೋಪವು ಈತನ ಮೇಲಿತ್ತು. ಈ ಕುರಿತು ಪೊಲೀಸರು ಕೆಲವೊಂದಿಷ್ಟು ಮಾಹಿತಿಯನ್ನು ಕಲೆ ಹಾಕಿದ ಬಳಿಕ ವೈದ್ಯನ ಮೆನೆಯ ಮೇಲೆ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಆತನ ಮನೆಯ ಬೆಡ್ ರೂಮ್ ನಲ್ಲಿ ಬಚ್ಚಿಟ್ಟಿದ್ದ, 134 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ರಾಹುಲ್ ಬಂಟಿ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!