ಗೆಲುವಿನತ್ತ ಅಸಾದುದ್ದೀನ್ ಓವೈಸಿ: ಬಿಜೆಪಿಯ ಮಾಧವಿ ಲತಾಗೆ ಹಿನ್ನಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೋಕಸಭೆ ಚುನಾವಣೆ ಫಲಿತಾಂಶಗಳು (Lok Sabha result) ಪ್ರಕಟವಾಗುತ್ತಿದ್ದು, ಬಿಜೆಪಿಯ ಕೊಂಪೆಲಾ ಮಾಧವಿ ಲತಾ, ಎಐಎಂಐಎಂ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ವಿರುದ್ದ ಭಾರೀ ಹಿನ್ನಡೆ ಅನುಭವಿಸಿದ್ದಾರೆ.

ಮೂಲಗಳ ಪ್ರಕಾರ ಅಸಾದುದ್ದೀನ್ ಓವೈಸಿಯವರು ಮಾಧವಿ ಲತಾ ವಿರುದ್ದ 3,17,298 ಮತಗಳ ಭಾರೀ ಅಂತರದಿಂದ ಲೀಡ್ ನಲ್ಲಿದ್ದಾರೆ.

ಒವೈಸಿಗೆ ಇದುವರೆಗೆ 6,29,989 ಮತ ಪಡೆದಿದ್ದಾರೆ. ಈ ಮೂಲಕ ಗೆಲ್ಲುವ ಲೆಕ್ಕಾಚಾರ ಹಾಕಿದ್ದ ಮಾಧವಿ ಲತಾಗೆ ಭಾರಿ ಹಿನ್ನಡೆಯಾಗಿದೆ.

2019ರ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ, ಬಿಜೆಪಿಯ ಡಾ.ಭಗವಂತ್ ರಾವ್ ವಿರುದ್ದ 2,82,187 ಮತದಿಂದ ಗೆಲುವು ದಾಖಲಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!