ಹೊಸದಿಗಂತ ವರದಿ, ಬೀದರ್:
ಲೋಕಸಭೆ ಚುನಾವಣೆ ಫಲಿತಾಂಶಗಳು (Lok Sabha result) ಪ್ರಕಟವಾಗುತ್ತಿದ್ದು, ಕರ್ನಾಟಕ ಬೀದರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಗೆಲುವು ಸಾಧಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಜನ ಅಪಾರ ಸಂಖ್ಯೆಯಲ್ಲಿ ಮತಗಳ ಅಂತರದಿಂದ ಯುವಕನಾಗಿರುವ ನನ್ನ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ನಿರುದ್ಯೋಗ, ಕಾರಂಜಾ ನೀರಾವರಿ ಯೋಜನೆ, ಕೃಷಿಕರಿಗೆ ನೀರಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಬೀದರನ್ನು ವಿಶ್ವ ಮಟ್ಟದ ಪ್ರವಾಸಿ ತಾಣವಾಗಿ ಬೆಳೆಸಲು ಸೇರಿದಂತೆ ಸಾಂವಿಧಾನಿಕವಾಗಿ ಜನರ ಹಕ್ಕು ಕಾಯುವ ದೃಷ್ಟಿಯಿಂದ ಕೆಲಸ ಮಾಡುವೇ ಎಂದು ಹೇಳಿದ್ದಾರೆ.