ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್(Yusuf Pathan) ಅವರು ಪಶ್ಚಿಮ ಬಂಗಾಳದ ಬಹರಂಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಟಿಎಂಸಿ(TMC) ಪಕ್ಷದಿಂದ ಸ್ಪರ್ಧಿಸಿದ್ದ ಯೂಸುಫ್, ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಕಾಂಗ್ರೆಸ್ ಪಕ್ಷದ ಹಾಲಿ ಸಂಸದರಾಗಿದ್ದ ಅಧೀರ್ ರಂಜನ್ ಚೌಧರಿ(Adhir Chowdhury) ವಿರುದ್ಧ 50 ಸಾವಿರ ಮುನ್ನಡೆ ಸಾಧಿಸಿ ಗೆಲುವು ಕಂಡಿದ್ದಾರೆ.
ಮೂಲತಃ ಗುಜರಾತ್‌ನವರಾದ ಯೂಸುಫ್ ಪಠಾಣ್ ಐಪಿಎಲ್ನಲ್ಲಿ ಕೆಕೆಆರ್ ತಂಡದ ಪರ ಹಲವು ವರ್ಷಗಳ ಕಾಲ ಆಡಿದ್ದರು. ಅಲ್ಲದೆ ತಂಡದ ಪ್ರಧಾನ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಬಂಗಾಳದಾದ್ಯಂತ ಯೂಸುಫ್ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದೇ ಕಾರಣದಿಂದ ಅವರಿಗೆ ಪಶ್ಚಿಮ ಬಂಗಾಳದಿಂದ ಟಿಎಂಸಿ ಟಿಕೆಟ್ ನೀಡಿತ್ತು. ಇದೀಗ ಮೊದಲ ಪ್ರಯತ್ನದಲ್ಲೇ ಅವರು ಗೆದ್ದು ಬೀಗಿದ್ದಾರೆ.