ಸುಧಾಕರ್‌ ಬೆಂಬಲಿಗರೇ ಕಲ್ಲು ಎಸೆದಿರಬಹುದು: ಪ್ರದೀಪ್ ಈಶ್ವರ್ ಸಹೋದರ ಚೇತನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಿನ್ನೆ ರಾತ್ರಿ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಬಗ್ಗೆ ಅವರ ಸಹೋದರ ಚೇತನ್‌ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಗೆದ್ದ ಕಾರಣ ಅವರ ಬೆಂಬಲಿಗರೆ ಕೃತ್ಯ ಎಸಗಿದ್ದಾರೆ ಎಂದು ಅನುಮಾನ ಪಟ್ಟಿದ್ದಾರೆ.

ರಾತ್ರಿ 10.15 ಸಮಯದಲ್ಲಿ ನಾಲ್ಕು ಜನ ಹುಡುಗರು ಕಲ್ಲು ತೂರಾಟ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ಸೆನ್ಸರ್ ಆನ್ ಆಗ್ತಿದ್ದಂತೆ ಹುಡುಗರು ಓಡಿ ಹೋದರು. ನಾಲ್ಕೈದು ಕಲ್ಲುಗಳನ್ನು ಎಸೆದಿದ್ದಾರೆ. ಮನೆಯ ಕಿಟಕಿ ಪುಡಿ ಪುಡಿ ಆಗಿದೆ. ಕಲ್ಲಿನ ಶಬ್ದ ಕೇಳಿ ಆಚೆ ಬಂದೆವು ಭಯ ಆಯಿತು ಎಂದಿದ್ದಾರೆ.

ಸುಧಾಕರ್ ಗೆಲುವಿನ ಬೆನ್ನಲ್ಲೇ ಸೋಷಿಯಲ್ ಮೀಡಿಯಾಗಳಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸಾಕಷ್ಟು ಟ್ರೋಲ್ ಆದರು. ಅದಕ್ಕೆ ಕಾರಣ ಪ್ರದೀಪ್ ಈಶ್ವರ್ ಆಡಿದ್ದ ಮಾತು. ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪ್ರದೀಪ್ ಈಶ್ವರ್, ಡಾ ಕೆ ಸುಧಾಕರ್ ಅವರು ರಕ್ಷಾ ರಾಮಯ್ಯ ಅವರಿಗಿಂತ ಒಂದು ಮತ ಹೆಚ್ಚು ಪಡೆದರೆ ನಾನು ಫಲಿತಾಂಶ ಬಂದ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದರು. ಇದೀಗ ರಾಜೀನಾಮೆ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಇದೇ ಕೆಲಸವನ್ನು ನಿನ್ನ ಸಹೋದರ ವಚನಭ್ರಷ್ಠ, ಡೈಲಾಗ್ ಕಿಂಗ್ ಪ್ರದೀಪ್ ಈಶ್ವರ್ ಏಕೆ ಮಾಡಿಸಿರಬಾರದೂ.

LEAVE A REPLY

Please enter your comment!
Please enter your name here

error: Content is protected !!