ಹಾಸನದಲ್ಲೊಂದು ಅಮಾನುಷ ಘಟನೆ: ಹಣಕ್ಕಾಗಿ ತನ್ನದೇ ಮಗುವನ್ನು ಮಾರಾಟ ಮಾಡಿದ ಪಾಪಿ

ಹೊಸದಿಗಂತ ಹಾಸನ ;

ಹಣಕ್ಕಾಗಿ ಮಗು ಮಾರಾಟ ಮಾಡಿರುವ ಪ್ರಕರಣವು ತಡವಾಗಿ ಬೆಳಿಕೆಗೆ ಬಂದಿದ್ದು, ಈ ಪ್ರಕರಣವು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೇಲೂರು ತಾಲ್ಲೂಕ್ ಅರೇಹಳ್ಳಿ ಹೋಬಳಿ ಕಿತ್ತಾವರ ಎಸ್ಟೇಟ್‌ನಲ್ಲಿ ವಾಸವಾಗಿದ್ದ ಅಸ್ಸಾಂ ರಾಜ್ಯದ ಮಹಿಳೆ ಶುಕರಿ ಗರ್ಭಿಣಿಯಾಗಿದ್ದು, ಮೇ. 16 ರಂದು ಸಕಲೇಶಪುರ ಕಾಫರ್ಡ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಸ್ಥಳೀಯ ಆಶಾ ಕಾರ್ಯಕರ್ತೆ ಮಗುವಿನ ಬಗ್ಗೆ ವಿಚಾರಿಸಲು ತೆರಳಿದ ವೇಳೆ ಪ್ರಕರಣ ಬಯಲಿಗೆ ಬಂದಿದೆ. ಆಶಾ ಕಾರ್ಯಕರ್ತೆ ಜೂ.01 ರಂದು ಮಗುವಿನ ಬಗ್ಗೆ ಮಾಹಿತಿ ಕಲೆಹಾಕಲು ತೆರಳಿದಾಗ ಶುಕರಿ ಮಗುವಿನ ಬಗ್ಗೆ ಸರಿಯಾದ ಮಾಹಿತಿ ನೀಡದೆ ತಡವರಿಸಿದ್ದಾರೆ. ಅನುಮಾನಗೊಂಡ ಆಶಕಾರ್ಯಕರ್ತೆ ತೀವ್ರವಿಚಾರಣೆ ನಡೆಸಿದಾ ತನ್ನ ಗಂಡ ಮಗುವನ್ನು ಮಾರಾಟ ಮಾಡಿರುವ ವಿಚಾರವನ್ನು ತಿಳಿಸಿದ್ದಾರೆ.

ಜೂ. 02 ರಂದು ಶುಕರಿಯವರನ್ನು ವಿಚಾರ ನಡೆಸಿದಾಗ ತನ್ನ ಗಂಡ ಅಮೀರ್ ಅಲಿ, ಅರೇಹಳ್ಳಿಯ ಮುಬಾಶಿರ್ ಸೇರಿ ಹಾಸನದ ಸತ್ತಾರಷರೀಫ್ ಮತ್ತು ಮತ್ತೊಬ್ಬರಿಗೆ ಮಗುವನ್ನು ಸುಮಾರು 2ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಸತ್ಯಾಂಶವನ್ನು ಬಿಚ್ಚಿಟ್ಟಿದ್ದಾರೆ. ಈ ಪ್ರಕರಣ ಕುರಿತು ಶಿಶು ಅಭಿವೃದ್ದಿ ಅಧಿಕಾರಿ ಜೂ.02 ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!