ಎಣ್ಣೆಯುಕ್ತ ತ್ವಚೆ ಇರುವವರಿಗೆ ನೀವು ಯಾವ ರೀತಿಯ ಕ್ರೀಮ್ ಬಳಸಿದರೂ ಕಿರಿಕಿರಿ ಮಾತ್ರ ತಪ್ಪಿದಲ್ಲ. ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಮೊಡವೆಗಳಿಂದ ಬಳಲುತ್ತಿರುತ್ತಾರೆ. ಆದರೆ ನೈಸರ್ಗಿಕ ಮನೆಮದ್ದುಗಳನ್ನು ಬಳಸಿಕೊಂಡು ನೀವು ಪರಿಹಾರವನ್ನು ಪಡೆಯಬಹುದು.
ಅಲೋವೆರಾ: ಪ್ರತಿದಿನ ಸಂಜೆ ನಿಮ್ಮ ಮುಖಕ್ಕೆ ಅಲೋವೆರಾ ಜೆಲ್ ಅನ್ನು ಅನ್ವಯಿಸಿ ಮತ್ತು ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಟೊಮೇಟೊ: ಹಣ್ಣಾದ ಟೊಮೆಟೊ ರಸವನ್ನು ಮುಖಕ್ಕೆ ಹಚ್ಚುವುದರಿಂದ ಎಣ್ಣೆಯ ಅಂಶ ಹೀರಿಕೊಂಡು ತ್ವಚೆಯ ಮೇಲಿನ ಸುಕ್ಕುಗಳು ಕಡಿಮೆಯಾಗುತ್ತವೆ.
ನಿಂಬೆ ರಸ: ಇದರಲ್ಲಿ ಸಿಟ್ರಿಕ್ ಆಮ್ಲ ಹೇರಳವಾಗಿರುವುದರಿಂದ ತ್ವಚೆಯ ಆಳಕ್ಕೆ ತೂರಿಕೊಂಡು ಸತ್ತ ಜೀವಕೋಶಗಳನ್ನು ತೆಗೆದು ಚರ್ಮಕ್ಕೆ ಹೊಸ ಹೊಳಪನ್ನು ನೀಡುತ್ತದೆ.