ಮೇಷ
ನಿಮ್ಮ ವ್ಯವಹಾರಕ್ಕೆ ಅಡ್ಡಿ ಆತಂಕ. ವಿಫಲತೆಯ ಭೀತಿ. ಆದರೆ ದಿನಕಳೆದಂತೆ ಭೀತಿ ನಿವಾರಣೆ. ಎಲ್ಲವೂ ಸುಸ್ಥಿತಿಗೆ ಬರುವುದು. ಆತ್ಮೀಯರ ಸಹಕಾರ.
ವೃಷಭ
ಖಾಸಗಿ ಬದುಕಿಗೆ, ಸಂಬಂಧಗಳ ಕುರಿತು ಹೆಚ್ಚು ಗಮನ ಕೊಡಿ. ವೃತ್ತಿಯ ಒತ್ತಡದಲ್ಲೇ ಕಳೆದು ಹೋಗದಿರಿ. ಸಂಬಂಧ ಹಾಳಾಗದಂತೆ ನೋಡಿಕೊಳ್ಳಿ.
ಮಿಥುನ
ಕಾರ್ಯಶೈಲಿಯಲ್ಲಿ ಬದಲಾವಣೆ ಮಾಡಬೇಕು. ಇಲ್ಲವಾದರೆ ತೊಡಕಿಗೆ ಸಿಲುಕುವಿರಿ. ಹಣದ ತೊಂದರೆ ನಿವಾರಿಸಲು ಗಮನ ಕೊಡಿ.
ಕಟಕ
ಕೆಲಸದಲ್ಲಿ ಏಕಾಗ್ರತೆ ಮೂಡದು. ಮನಸ್ಸಿಗೆ ಅಸಂತೋಷ. ಕೆಲವು ಒತ್ತಡಗಳು ಕಾಡುತ್ತವೆ. ಬಂಧುವೊಬ್ಬರು ನಿಮ್ಮ ಕುಟುಂಬದಲ್ಲಿ ಸಮಸ್ಯೆ ಸೃಷ್ಟಿಸುತ್ತಾರೆ.
ಸಿಂಹ
ನೀವು ಬಯಸಿದಂತೆ ದಿನ ಸಾಗುವುದಿಲ್ಲ. ಇದರಿಂದ ಬೇಸರ. ಆದರೆ ಹತಾಶೆ ಬೇಡ. ಮುಂದಿನ ದಿನಗಳಲ್ಲಿ ನಿಮಗೆ ಪೂರಕ ಸನ್ನಿವೇಶ ಸೃಷ್ಟಿಯಾಗಲಿದೆ.
ಕನ್ಯಾ
ಸಣ್ಣ ವಿಷಯವೊಂದು ಮನಸ್ಸಿನ ನೆಮ್ಮದಿ ಕದಡುತ್ತದೆ. ನಿಜವಾಗಿ ಈ ಬಗ್ಗೆ ಹೆಚ್ಚು ಚಿಂತೆ ಅನಗತ್ಯ. ಧ್ಯಾನ, ಪ್ರಾರ್ಥನೆ ಸಹಕಾರಿಯಾದೀತು .
ತುಲಾ
ಬದುಕೆಂದ ಮೇಲೆ ಸುಂದರ ಮತ್ತು ಕೆಟ್ಟ ಅನುಭವ ಇದ್ದದ್ದೇ. ಕೆಟ್ಟ ಅನುಭವ ಮರೆಯಿರಿ. ಎಲ್ಲರೊಡನೆ ಬೆರೆತು ಆನಂದಿಸಲು ಕಲಿಯಿರಿ. ಹರ್ಷ ಚಿತ್ತರಾಗಿರಿ.
ವೃಶ್ಚಿಕ
ಶಾಂತ ಮನಸ್ಥಿತಿ. ಮನಸ್ಸು ಕೆಡಿಸುವ ಬೆಳವಣಿಗೆ ಸಂಭವಿಸದು. ಗೊಂದಲ ಪರಿಹಾರ. ಕೆಟ್ಟಿರುವ ಸಂಬಂಧದಲ್ಲಿ ಮತ್ತೆ ಸುಧಾರಣೆ ಕಾಣಬಹುದು.
ಧನು
ಪ್ರತಿಕೂಲ ಬೆಳವಣಿಗೆ ಸಂಭವಿಸಿದರೂ ಅದರಿಂದ ಬೇಸರ ಪಡದಿರಿ. ಒಳಿತು ಅದರ ಬೆನ್ನಿಗೇ ಬರಲಿದೆ. ಕಾಯುವ ತಾಳ್ಮೆ ಬೇಕಾಗಿದೆ.
ಮಕರ
ನಕಾರಾತ್ಮಕ ಚಿಂತನೆಗಳಿಂದ ಮನಸ್ಸು ಮುಕ್ತವಾಗುವುದು. ನಿಮಗೆ ಹರ್ಷ ತರುವ ಬೆಳವಣಿಗೆ. ಇದ್ದುದರಲ್ಲೆ ಖುಷಿ ಕಾಣಲು ಪ್ರಯತ್ನಿಸಿರಿ.
ಕುಂಭ
ಕೋಪ ತಾಪ ಏರಿಸುವ ಬೆಳವಣಿಗೆ ಸಂಭವಿಸಬಹುದು. ತಾಳ್ಮೆಯಿಂದ ವ್ಯವಹರಿಸಿದರೆ ಪರಿಸ್ಥಿತಿ ತಿಳಿಯಾದೀತು. ಮನಸ್ಸು ನಿಗ್ರಹ ಅವಶ್ಯ.
ಮೀನ
ಇತರರಿಗೆ ನೀವು ನೀಡುವ ನೆರವು ನಿಮಗೇ ತೃಪ್ತಿ ನೀಡಲಿದೆ. ಆತ್ಮೀಯರ ಜತೆಗೆ ಕಾಲ ಕಳೆಯುವ ಅವಕಾಶ. ಆರ್ಥಿಕ ಬಿಕ್ಕಟ್ಟು ಪರಿಹಾರ.