ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗ್ಗೆ ಕೆಲಸಕ್ಕೆ ಹೊರಟಿದ್ದ ಮೆಟ್ರೋ ಪ್ರಯಾಣಿಕರು ತಾಂತ್ರಿಕ ದೋಷದಿಂದ ಭಾರೀ ಸಮಸ್ಯೆ ಎದುರಿಸುವಂತಾಯಿತು. ಕೆಲಸಕ್ಕೆ ಹೊರಡಲು ಅರ್ಜೆಂಟ್ನಲ್ಲಿದ್ದ ಪ್ರಯಾಣಿಕರಿಗೆ ಮೆಟ್ರೋ ಬಾಗಿಲು ಓಪನ್ ಆಗದೇ ಕಿರಿಕಿರಿಯಾಗಿದೆ.
ತಾಂತ್ರಿಕ ದೋಷದಿಂದ ನೇರಳೆ ಮಾರ್ಗದ ಮೆಟ್ರೋ ಮಾರ್ಗದಲ್ಲಿ ವ್ಯತ್ಯಯ ಕಂಡು ಬಂದಿದೆ. ಇಂದು ಬೆಳಗ್ಗೆ 9.58 ಗಂಟೆ ಸುಮಾರಿಗೆ ಮೆಟ್ರೋ ಹತ್ತಿದ್ದ ಪ್ರಯಾಣಿಕರು ಇನ್ನೇನು ಇಳಿಯಬೇಕು ಎಂದು ಕಾದು ನಿಂತಿದ್ದು ಡೋರ್ ಓಪನ್ ಆಗದೆ ಬೋಗಿ ಒಳಗಡೆ ಲಾಕ್ ಆಗಿದ್ದರು. ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ಬೋಗಿಯ ಡೋರ್ಗಳು ಓಪನ್ ಆಗದೆ ಲಾಕ್ ಆಗಿದ್ದವು.
ಗಂಟೆಗಟ್ಟಲೆ ಕಾದರೂ ಡೋರ್ ಓಪನ್ ಆಗದೆ ಒಳಗಡೆ ಇದ್ದ ಪ್ರಯಾಣಿಕರು ಪರದಾಡುವಂತಾಗಿತ್ತು. ಬಳಿಕ ಸಮಸ್ಯೆ ಆಗಿದ್ದ ಮೆಟ್ರೋ ಬೋಗಿಯನ್ನ ಮೆಜೆಸ್ಟಿಕ್ನ ಟ್ರ್ಯಾಕ್ಗೆ ಶಿಫ್ಟ್ ಮಾಡಿ ಮೆಟ್ರೋ ಇಂಜಿನಿಯರ್ಗಳನ್ನ ಕರೆಸಿ ಲಾಕ್ ಆಗಿದ್ದ ಡೋರ್ ಓಪನ್ ಮಾಡಿಸಲಾಯ್ತು.