ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ʻರಾಬರ್ಟ್ʼ ಸಿನಿಮಾದ ನಿರ್ಮಾಪಕ ಉಮಾಪತಿಗೆ ‘ತಗಡು’ ಇನ್ನಿತರೆ ಕಠು ಪದಗಳನ್ನು ಬಳಸಿ ನಿಂದಿಸಿದ್ದರು. ಇದಾದ ಬಳಿಕ ನಿರ್ಮಾಪಕ ಉಮಾಪತಿ ಕೂಡ ಬೇಸರದಲ್ಲಿಯೇ ಪ್ರತಿಕ್ರಿಯೆ ನೀಡಿದ್ದರು.
ಇದೀಗ ದರ್ಶನ್ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದು, ಈ ಕುರಿತು ಉಮಾಪತಿ ಪರೋಕ್ಷವಾಗಿ ಪೋಸ್ಟ್ ಮೂಲಕ ತಿರುಗೇಟು ಕೊಟ್ಟಿದ್ದಾರೆ.
‘ತಾಳ್ಮೆ ಕೆಲವೊಮ್ಮೆ ಶಕ್ತಿ’ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.ತಗಡು ಯಾರು ಗೊತಾಯ್ತಾ? ಎಂದು ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ.
ದರ್ಶನ್ ಉಮಾಪತಿಗೆ ವಾರ್ನಿಂಗ್ ನೀಡಿದ್ದೇನು?
ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ದರ್ಶನ್ ಈ ಬಗ್ಗೆ ಮಾತನಾಡಿ ʻʻತಗಡೇ, ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?ʼʼ ಎಂದು ವೇದಿಕೆ ಮೇಲೆಯೇ ಉಮಾಪತಿಗೆ ಪ್ರಶ್ನೆ ಮಾಡಿದ್ದರು. ʻಈ ಕಥೆ ನಾನು ಮಾಡಿಸಿದೆ, ಕಥೆ ನಾನು ಕೊಟ್ಟೆ ಎಂದು ಎಂದು ಹೇಳಿಕೊಂಡು ಬಂದಿದ್ದೆಯಲ್ವಾ?ಇಂಥ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು. ಅಯ್ಯೋ ತಗಡೇ, ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಎಂದು ಉಮಾಪತಿಗೆ ನೇರವಾಗಿ ದರ್ಶನ್ ಖಡಕ್ ವಾರ್ನಿಂಗ್ ಕೊಟ್ಟಿದ್ದರು.
ನಟ ದರ್ಶನ್ ಬಳಸಿದ ಪದ ಬಳಕೆ ಬಗ್ಗೆ ಬಳಿಕ ಉಮಾಪತಿ ಮಾತನಾಡಿ ‘ಅದು ತಪ್ಪು ಸರ್, ಸಮಸ್ಯೆಗಳು ಎಲ್ಲ ಕಡೆ ಬರುತ್ತದೆ. ಆದರೆ ಅದನ್ನು ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ದೇಹ ತೂಕ ವಿದ್ದರೆ ಸಾಲದು ಮಾತು ತೂಕವಿರಬೇಕು. ನಾನು ತಪ್ಪು ಮಾಡಿದರೂ ತಪ್ಪೆ. ಬೇರೆ ಯಾರಾದರೂ ತಪ್ಪು ಮಾಡಿದರೆ ತಪ್ಪೇ. ನಾವೆಲ್ಲ ಸಿನಿಮಾ ಮುಖಾಂತರ ಮೆಸೆಜ್ ಕೊಡಬೇಕು. ಈ ವಿವಾದದಿಂದ ಸಂದೇಶ ಕೊಡುವಂತದ್ದು ಏನಿಲ್ಲ’ ಎಂದಿದ್ದರು.